ಯಲಬುರ್ಗಾ: ಸರ್ಕಾರದ ಸೌಲಭ್ಯವನ್ನು ರೈತರು ಪಡೆದುಕೊಳ್ಳುವುದರ ಮೂಲಕ ದೇಶದ ನೆಲದಲ್ಲಿ ಕೃಷಿ ಕ್ರಾಂತಿ ಮಾಡಬೇಕು ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅಲ್ಲಾಗಿರಿರಾಜ್ ಕನಕಗಿರಿ ಕರೆ ನೀಡಿದರು.
ಸಂಗನಬಸವ ರೈತ ಉತ್ಪಾದಕರ ಕಂಪನಿ ಬೇವೂರು ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘ ಕಲಬುರ್ಗಿ ಜಂಟಿಯಾಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ತರಕಾರಿ ಬೀಜ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು.
ಇಂದಿನ ವಾಸ್ತವ ಕಾಲಮಾನದಲ್ಲಿ ರೈತರು ವೈಜ್ಞಾನಿಕ ಕೃಷಿ ಹಾಗೂ ಲಾಭದಾಯಕ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಮತ್ತು ವಿದ್ಯಾವಂತ ಯುವಕರು ಕೃಷಿ ಕಡೆಗೆ ಬರಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಂಗನಬಸವ ರೈತ ಉತ್ಪಾದಕರ ಕಂಪನಿ ಸಿಇಓ ಡಿ.ಕೆ.ಗೊಂದಿ ಮಾತನಾಡಿ ರೈತರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯವನ್ನು ನೀಡಲು ರೈತ ಉತ್ಪಾದಕರ ಕಂಪನಿ ಬೇವೂರು ಸದಾ ಕಾಲ ಸಿದ್ದವಾಗಿದೆ ಸದರಿ ಸೌಲಭ್ಯ ಪಡೆಯಲು ರೈತರು ಮುಂದಾಗಬೇಕು ಎಂದು ಹೇಳಿದರು.
ರೈತ ಉತ್ಪಾದಕರ ಕಂಪನಿ ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರಾ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಗನಬಸವ ರೈತ ಉತ್ಪಾದಕರ ಕಂಪನಿಯ ಷೇರುದಾರರು ಹಾಗೂ ಕಾಳಪ್ಪ ಬಡಿಗೇರ, ಸಂಜೀವ ಭಜಂತ್ರಿ ಮತ್ತು ಇತರರಿದ್ದರು.