*ಪ್ರತಿಯೋಬ್ಬರು ಒಂದು ಮರ ನೆಡುವುದರ ಮೂಲಕ ಪರಿಸರ ದಿನ ಆಚರಿಸೋಣ ಎಂದು ಕರೆ ನೀಡಿದ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಮನಿ.*
ಇಟಗಿ ಗ್ರಾಮ ಪಂಚಾಯತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಜಗತ್ತಿನಲ್ಲಿ ಜೀವಿಗಳು ವಾಸಿಸುವ ಒಂದೇ ಒಂದು ಪ್ರದೇಶ ಅಂದರೆ, ಅದು ಭೂಪ್ರದೇಶ, ಈ ಭೂಪ್ರದೇಶ ಸಾವಿರಾರು ವರ್ವಗಳಿಂದ ಇದೆ ಆದರೆ ಕೇವಲ ಕೆಲವು ದಶಕಗಳಲ್ಲಿ ಹಾಳಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.
ಪರಿಸರವನ್ನು ಹಾಳು ಮಾಡದೇ ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಜವಬ್ದಾರಿ ಇಂದಿನ ನಾಗರೀಕರದ್ದಾಗಿದೆ ಅದಕ್ಕಾಗಿ ಎಲ್ಲರೂ ಒಂದು ಮರವನ್ನು ನೆಡುವ ಪ್ರತಿಜ್ಞೆ ಮಾಡಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ವರ್ಷ ಒಂದು ಸಾರಿ ಬಳಸುವ ಪ್ಲಾಸ್ಟಿಕ್ ಅನ್ನು ತೇಜಿಸಬೇಕು ಎನ್ನುವ ಗುರಿ ಹೋಂದಲಾಗಿದೆ.
ಜಾಗತೀಕ ತಾಪಮಾನದಿಂದಾಗಿ ಹವಮಾನ ಬದಲಾವಣೆಗಳು ಆಗಿ ಅತೀವೃಷ್ಠಿ ಮತ್ತು ಆನಾವೃಷ್ಠಿ ಗಳುವಸಂಭವಿಸುತ್ತಿವೆ. ಅದಕ್ಕಾಗಿ ಪರಿಸರವನ್ನು ಉಳಿಸಬೇಕು, ಮರಗಳನ್ನು ಬೆಳಸಬೇಕು ಎಂದರು.
ನಂತರ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಮುದ್ದಾಬಳ್ಳಿ ಮಾತನಾಡಿ ಪಾರಂಪರಿಕವಾಗಿ ಹಿರಿಯರು ಆಚರಿಸುತ್ತಾ ಬಂದಿರುವ ಸಂಪ್ರದಾಯಗಳನ್ನು ರೂಢಿಯಾಗಿಸಿಕೊಳ್ಳಬೇಕು ಶೌಚಾಲಯಗಳನ್ನು ಬಳಸಬೇಕು ಎಂದರು, ನಂತರ ಆದರ್ಶ್ಯ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಕಾಂತ ಪೂಜಾರ ಪರಸರ ಸಂರಕ್ಷಣೆಗೆ ಸಂಬಂದಿಸಿದಂತೆ ಸ್ವತಃ ತಾವೆ ಬರೆದಿರುವ ಗೀತೆಯನ್ನು ಹಾಡಿ ಮಕ್ಕಳನ್ನು ಪರಿಸರ ಸಂರಕ್ಷಣೆ ಮಾಡಲು ಪ್ರೇರೆಪಿಸಿದರು.
ಪರಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆದರ್ಶ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಿಸಲು ಎಲ್ಲರೂ ಪಣತೋಡಬೇಕು ಎಂದರು.
ಆದರ್ಶ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಿ ಪರಿಸರ ಪ್ರಜ್ಞೆ ಮೂಡಿಸಲಾಯಿತು.
ವಿಶೇಷತೆ: ಪರಿಸರ ಸಂರಕ್ಷಣೆಯ ಕುರಿತು ಶಾಲಾ ಮಕ್ಕಳು, ಶಿಕ್ಷಕರು, ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ಸ್ಥಳದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಭುರಾಜ್ ಹಳ್ಳಿ, ಉಪಾಧ್ಯಕ್ಷರಾದ ಬಸವರಾಜೇಶ್ವರಿ ಕಂತಿ,ಪಿಡಿಓ ಶರಣಪ್ಪ ಕೆಳಗಿನಮನಿ, ಗಗ್ರಾಪಂ ಸದಸ್ಯರು, ಮುಖ್ಯೋಪಾಧ್ಯಾಯರಾದ ರಾಮರಡ್ಡೆಪ್ಪ ಶಾಲಾ ಶಿಕ್ಷಕರು, ಐ.ಇ.ಸಿ ಸಂಯೋಜಕರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಜರಿದ್ದರು.