ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾಲಯ, ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯ, ಹಾವೇರಿ ವಿಶ್ವವಿದ್ಯಾಲಯ, ಬೀದರ ವಿಶ್ವವಿದ್ಯಾಲಯ ಮತ್ತು ಕೊಪ್ಪಳದ ಶ್ರೀ.ಗ.ವಿ.ವ.ಟ್ರಸ್ಟ್‌ನ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಯುಯುಸಿಎಂಎಸ್) ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜೂನ್ 08ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಬಾಗಲಕೋಟ ವಿವಿ ಕುಲಪತಿಗಳಾದ ಪ್ರೊ ಆನಂದ ಎಸ್ ದೇಶಪಾಂಡೆ, ಹಾವೇರಿ ವಿವಿ ಕುಲಪತಿಗಳಾದ ಪ್ರೊ ಸುರೇಶ ಜಂಗಮಶೆಟ್ಟಿ, ಬೀದರ ವಿವಿ ಕುಲಪತಿಗಳಾದ ಪ್ರೊ ಬಿ.ಎಸ್ ಬಿರಾದಾರ, ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟನ ಆಡಳಿತಾಧಿಕಾರಿಗಳಾದ ಡಾ ಎಸ್.ಎ ಪಾಟೀಲ್, ಶಿಕ್ಷಣ ಇಲಾಖೆ (ಉನ್ನತ) ವಿಶೇಷ ಅಧಿಕಾರಿ, ಕರ್ನಾಟಕ ರಾಜ್ಯ ನೋಡಲ್ ಅಧಿಕಾರಿಗಳಾದ ಡಾ.ಭಾಗ್ಯವಾನ ಮುದಿಗೌಡರ ಅವರು ಪಾಲ್ಗೊಳ್ಳುವರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಬಿ.ಕೆ.ರವಿ ಅವರು ಅಧ್ಯಕ್ಷತೆ ವಹಿಸುವರು. ಕೊಪ್ಪಳ ವಿವಿ ಪ್ರಭಾರ ಕುಲಸಚಿವರಾದ ಪ್ರೊ ಕೆ.ವಿ.ಪ್ರಸಾದ್, ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಚನ್ನಬಸವ ಅವರ ಕಾರ್ಯಾಗಾರದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 08ರಂದು ಒಂದು ದಿನದ ತರಬೇತಿ ಕಾರ್ಯಾಗಾರ
