ಕಾಂಗ್ರೆಸ್ ಸರ್ಕಾರದ ಮಹತ್ವದ ಇನ್ನೊಂದು ಗ್ಯಾರೆಂಟಿ ಯೋಜನೆಯಾದ “ಗೃಹ ಲಕ್ಷ್ಮೀ ಯೋಜನೆ” ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಮುನ್ನಡೆಸುವ ಪ್ರಯತ್ನದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಗೃಹ ಲಕ್ಷ್ಮಿ ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ ಎಂದು ಘೋಷಿಸಲಾಗಿದೆ. “ಗೃಹ ಲಕ್ಷ್ಮೀ ಯೋಜನೆ”ಯಡಿಯಲ್ಲಿ ರಾಜ್ಯ ಸರ್ಕಾರವು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಮೊತ್ತವನ್ನು ಖಾತೆಗೆ ಜಮಾ ಮಾಡಲಿದೆ.
ಈ ಮಹತ್ವದ ಯೋಜನೆ ಕುರಿತು ಕೆಲವು ಮಾಹಿತಿ ದೊರೆತಿದ್ದು, ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ಹಾಗೂ ಮಂಜೂರಾತಿ ಅಧಿಕಾರವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ. ಆಯಾ ತಾಲೂಕುಗಳಲ್ಲೇ ಅರ್ಜಿಗಳ ವಿಲೇವಾರಿ ನಡೆಸಲಿದೆ.