ಚಿಕ್ಕಮಗಳೂರು : ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಸರ್ಕಾರ ಘೋಷಿಸಿದ್ದಂತ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮತ್ತಷ್ಟು ವಿಳಂಬವಾಗಲಿದೆ. ಆದರೇ ಆಗಸ್ಟ್ 17 ಅಥವಾ 18ರಂದು ಯಜಮಾನಿ ಮಹಿಳೆಯ ಖಾತೆಗೆ ರೂ.2000 ಹಣ ಜಮೆಯಾಗಲಿದೆ ಎಂಬುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇಂದು ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗೃಹಲಕ್ಷ್ಮೀ ಯೋಜನೆ ಜನರಿಗೆ ಬಳಷ್ಟು ಸರಳವಾಗಿ ಸಿಗಬೇಕು. ಆ ನಿಟ್ಟಿನಲ್ಲಿ ಈ ಯೋಜನೆಯ ಅರ್ಜಿಯನ್ನು ಸರಳೀಕರಣ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಬದಲಾವಣೆ ನಡೆಯುತ್ತಿದೆ ಎಂದರು.
ಈ ಯೋಜನೆಯಲ್ಲಿ ಬದಲಾವಣೆಯಿಂದ ವಿಳಂಬವಾಗುತ್ತಿದೆ ವಿನಃ ಮತ್ಯಾವ ಕಾರಣಗಳಿಂದಲ್ಲ, ಜನರಿಗೆ ಸರಳವಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಅಧಿಕಾರಿಗಳಿಗೆ ಅರ್ಜಿಯಲ್ಲಿ ಕೆಲವು ಬದಲಾವಣೆಯನ್ನು ಮಾಡುವುದಕ್ಕೆ ಸೂಚಿಸಲಾಗಿದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ರಾಜ್ಯದ ಬಡ ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ ಹಣ ಜಮೆ ಆಗುವುದರಲ್ಲಿ ಯಾವುದೇ ವಿಳಂಬವಿಲ್ಲ. ಆಗಸ್ಟ್ 17 ಅಥವಾ 18ರಂದು ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ 2000 ರೂ. ಹಣ ಜಮೆ ಆಗಲಿದೆ. ಯಾರೂ ಗೊಂದಲಕ್ಕೆ ಒಳಗಾಗ ಬಾರದು ಎಂದು ಸ್ಪಷ್ಟಪಡಿಸಿದರು.