‘ಗೃಹ ಜ್ಯೋತಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಆರಂಭ: ಇಲ್ಲಿದೆ ವೆಬ್ ಸೈಟ್

You are currently viewing ‘ಗೃಹ ಜ್ಯೋತಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಆರಂಭ: ಇಲ್ಲಿದೆ ವೆಬ್ ಸೈಟ್


ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ‘ಶಕ್ತಿ ಯೋಜನೆ’ಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ಬೆನ್ನಲ್ಲೆ, ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಕೆ ನಾಳೆಯಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಅದರ ವೆಬ್ ಸೈಟ್ ( Website ) ವಿಳಾಸ ಹೀಗಿದೆ. https://sevasindhugs1.karnataka.gov.in/index.html ಸೇವಾಸಿಂಧು ಪೋರ್ಟಲ್ ನ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದು ಎಂದು ಇಲಾಖೆ ತಿಳಿಸಿದೆ.

ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಯ ಭರವರೆಗಳನ್ನು ರಾಜ್ಯದ ಜನತೆಗೆ ನೀಡಿತ್ತು. ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹೀಡಿದೆ. ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆಯ ಬಳಿಕ, ಇದೀಗ ಅಧಿಕೃತ ಅನುಷ್ಠಾನದ ಮುದ್ರೆಯನ್ನು ಒತ್ತಿ ಆದೇಶ ಹೊರಡಿಸಲಾಗಿತ್ತು.

ಈಗಾಗಲೇ ರಾಜ್ಯಾದ್ಯಾಂತ “ಶಕ್ತಿ ಯೋಜನೆ”ಯ ಅಡಿಯಲ್ಲಿ ಜೂನ್.11ರಿಂದ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ನಿನ್ನೆ ಒಂದೇ ದಿನ 55.09 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಮಾಹಿತಿ ಇದೆ.

*ನಾಳೆಯಿಂದ “ಗೃಹ ಜ್ಯೋತಿ ಯೋಜನೆ” (ಉಚಿತ ವಿದ್ಯುತ್ ಯೋಜನೆ)ಗೆ ಅರ್ಜಿ ಸಲ್ಲಿಕೆ ಆರಂಭ*

ನಾಳೆಯಿಂದ (ಜೂನ್.18)ರ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ( Free Electricity ) ಯೋಜನೆಗಾಗಿ ಅರ್ಜಿ ಸಲ್ಲಿಕೆ ಆರಂಭಗೊಳ್ಳುತ್ತಿದೆ. ಈಗಾಗಲೇ ಸರ್ಕಾರ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದು, ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

*”ಗೃಹ ಜ್ಯೋತಿ ಯೋಜನೆ”ಗೆ ಅರ್ಜಿ ಸಲ್ಲಿಸಲು ಈ ವೆಬ್ ಸೈಟ್ ಗೆ ಭೇಟಿ ನೀಡಿಬಹುದು.*

* ಸೇವಾ ಸಿಂಧು ಪೋರ್ಟಲ್ ನಲ್ಲಿ ಒಂದೇ ಎಡೆಯಲ್ಲಿ ಅರ್ಜಿ ಸಲ್ಲಿಕೆಗೆ ಸಿಗುವಂತೆ ವ್ಯವಸ್ಥೆ ಮಾಡಿದೆ.

* 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ನಾಳೆ ಅರ್ಜಿ ಸಲ್ಲಿಸಲು ರಾಜ್ಯದ ಜನರು https://sevasindhugs1.karnataka.gov.in/index.html ಸೇವಾಸಿಂಧು ಪೋರ್ಟಲ್ ನ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

error: Content is protected !!