ಕುಕನೂರ ತಾಲೂಕಿನ 15 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ

You are currently viewing ಕುಕನೂರ ತಾಲೂಕಿನ 15 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ

ಕೊಪ್ಪಳ : ಕುಕನೂರ ತಾಲೂಕಿನ 15 ಗ್ರಾಮ ಪಂಚಾಯತಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗಾಗಿ ಜೂನ್ 20ರಂದು ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯಾ ಗ್ರಾಮ ಪಂಚಾಯತಗಳ ಸದಸ್ಯರ ಸಭೆ ನಡೆಯಿತು.
ಕುಕನೂರ ತಾಲೂಕಿನಲ್ಲಿ 15 ಗ್ರಾಮ ಪಂಚಾಯತಗಳ ಅಧ್ಯಕ್ಷ ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ 3 ಸ್ಥಾನಗಳು (ಈ ಪೈಕಿ 2 ಸ್ಥಾನಗಳು ಮಹಿಳೆಯರಿಗೆ)., ಅನುಸೂಚಿತ ಪಂಗಡ 1 ಸ್ಥಾನ ಮಹಿಳೆಗೆ., ಹಿಂದುಳಿದ ವರ್ಗ ‘ಅ’ 2 ಸ್ಥಾನಗಳು ಮಹಿಳೆಯರಿಗೆ., ಹಿಂದುಳಿದ ವರ್ಗ ‘ಬ’ ಗೆ 1 ಸ್ಥಾನ., ಸಾಮಾನ್ಯ ವರ್ಗಕ್ಕೆ 8 ಸ್ಥಾನಗಳು (ಈ ಪೈಕಿ 3 ಸ್ಥಾನಗಳು ಮಹಿಳೆಯರಿಗೆ) ಸ್ಥಾನಗಳಿಗೆ ಮೀಸಲು ನಿಗದಿಪಡಿಸಬೇಕಿದೆ. ಅದೇ ರೀತಿ 15 ಉಪಾಧ್ಯಕ್ಷ ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ 3 ಸ್ಥಾನಗಳು (ಈ ಪೈಕಿ 2 ಸ್ಥಾನಗಳು ಮಹಿಳೆಯರಿಗೆ)., ಅನುಸೂಚಿತ ಪಂಗಡ 1 ಸ್ಥಾನ ಮಹಿಳೆಗೆ., ಹಿಂದುಳಿದ ವರ್ಗ ‘ಅ’ 2 ಸ್ಥಾನಗಳು ಮಹಿಳೆಯರಿಗೆ., ಹಿಂದುಳಿದ ವರ್ಗ ‘ಬ’ ಗೆ 1 ಸ್ಥಾನ., ಸಾಮಾನ್ಯ ವರ್ಗಕ್ಕೆ 8 ಸ್ಥಾನಗಳು (ಈ ಪೈಕಿ 3 ಸ್ಥಾನಗಳು ಮಹಿಳೆಯರಿಗೆ) ಸ್ಥಾನಗಳಿಗೆ ಮೀಸಲು ನಿಗದಿಪಡಿಸಬೇಕಿದೆ ಎಂದು ನಿರ್ದೇಶಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಮಾಡಿದೆ. ಅದರಂತೆ ಜಿಲ್ಲಾಧಿಕಾರಿಗಳಾದ ಎಂ.ಸುAದರೇಶ ಬಾಬು ಅವರ ಸಮ್ಮುಖದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು.
ಗ್ರಾ.ಪಂ.ವಾರು ವಿವಿರ: ಕುದರಿಮೋತಿ ಗ್ರಾಮ ಪಂಚಾಯತ್‌ಗೆ ಅಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ., ಹಿರೇಬಿಡನಾಳ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ., ಮಂಗಳೂರು ಗ್ರಾಪಂ ಅಧ್ಯಕ್ಷ ಸ್ಥಾನ ಪ್ರವರ್ಗ-ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ., ಬಳಗೇರಿ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ., ಶಿರೂರು ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ., ಬೆಣಕಲ್ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ., ಭಾನಾಪುರ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ., ತಳಕಲ್ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ., ಇಟಗಿ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ., ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ., ಮಂಡಲಗೇರಿ ಗ್ರಾಪಂ ಅಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಬಿ., ಯರೇಹಂಚಿನಾಳ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ., ರಾಜೂರು ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ., ನೆಲಜೇರಿ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ., ಮಸಬಹಂಚಿನಾಳ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಯಿತು.
ಈ ಸಂದರ್ಭದಲ್ಲಿ ಕುಕನೂರು ತಹಶೀಲ್ದಾರರಾದ ನೀಲಪ್ರಭಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.

Leave a Reply

error: Content is protected !!