Good News : ಗೃಹಲಕ್ಷ್ಮೀಯರಿಗೆ ಮತ್ತೊಂದು ಗುಡ್ ನ್ಯೂಸ್..!

You are currently viewing Good News : ಗೃಹಲಕ್ಷ್ಮೀಯರಿಗೆ ಮತ್ತೊಂದು ಗುಡ್ ನ್ಯೂಸ್..!

ಬೆಳಗಾವಿ : ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 150 ರೂ. ಸೇವಾ ಕೇಂದ್ರಗಳು ವಸೂಲಿ ಮಾಡುತ್ತಿವೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಈಗ ಗೃಹ ಲಕ್ಷ್ಮೀ ಯೋಜನೆಗೂ ಹಾಗೆ ವಸೂಲಿ ಮಾಡಲಾಗುತ್ತಿದ್ದು, ಗೃಹಲಕ್ಷ್ಮೀಯರಿಗೆ ಮತ್ತೊಂದು ಗುಡ್ ನ್ಯೂಸ್ ಸರ್ಕಾರ ನೀಡಿದೆ. ಒಂದು ರೂಪಾಯಿ ಕೂಡ ಅರ್ಜಿ ಸಲ್ಲಿಸಲು ಕೊಡುವಂತಿಲ್ಲ. ಅರ್ಜಿ ಸಲ್ಲಿಕೆ ಉಚಿತವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‘ಗೃಹ ಲಕ್ಷ್ಮೀ ಯೋಜನೆಗೆ ಒಂದು ರೂ. ಖರ್ಚು ಮಾಡುವುದು ಬೇಡ. ಅರ್ಜಿ ಸಲ್ಲಿಕೆಗೆ ನಿಗದಿಯಾದ 20 ರೂ. ಹಣವನ್ನು ಸರ್ಕಾರ ಭರಿಸಲಿದೆ ಎಂದರು.

ಈಗಾಗಲೆ ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಸೂಚನೆ ನೀಡಿದ್ದೇನೆ. ಸೇವಾಸಿಂಧು, ಗ್ರಾಮ ಒನ್, ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್ ನಲ್ಲಿ ಅರ್ಜಿ ಸಲ್ಲಿಸುವ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿನ ಸೇವಾ ಕೇಂದ್ರಗಳಿಗೆ ಇಲಾಖೆಯಿಂದಲೇ ಅರ್ಜಿಗೆ 20 ರೂ. ನೀಡುತ್ತೇವೆ. ಸಿಎಂ ಸಿದ್ಧರಾಮಯ್ಯ ಸೂಚನೆ ಮೇರೆಗೆ ಅರ್ಜಿಗೆ 20 ರೂ. ನೀಡುತ್ತೇವೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವಿಲ್ಲ. ಯಾವುದೇ ಗೊಂದಲವಿಲ್ಲದೇ ಅರ್ಜಿ ಸಲ್ಲಿಸಿ ಎಂದು ಸ್ಪಷ್ಟನೆ ನೀಡಿದರು.

Leave a Reply

error: Content is protected !!