ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ “ಗೃಹಲಕ್ಷ್ಮಿಯೋಜನೆ” ಅಡಿಯಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾದ ಕೂಡಲೇ ನಿಮ್ಮ ನೊಂದಾಯಿತ ಸಂಖ್ಯೆಗೆ ಧ್ವನಿ ಮುದ್ರಿತ ಕರೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು. ಇನ್ನೂ 2 ಸಾವಿರ ಹಣ ಪಡೆಯಲು ಆಧಾರ್ ಜೊತೆಗೆ ಪಡಿತರ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ ಬಹಳ ಮುಂದೆ ಬಂದಿದೆ. 3 ದಿನಗಳಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ಕೊಡುತ್ತೇನೆ. ಗೃಹ ಲಕ್ಷ್ಮೀ ಯೋಜನೆಗೆ ಬಿಪಿಎಲ್ ಕಾರ್ಡ್ ಕಡ್ಡಾಯ ಹಾಗೂ ಯೋಜನೆಗೆ ಅರ್ಜಿ ಹಾಕಿದ ಬಳಿಕ ಸ್ವೀಕೃತ ಆದಾಗ ವಾಯ್ಸ್ ಮೇಸೆಜ್ ಬರುತ್ತೆ. ಪ್ರತಿ ತಿಂಗಳು ಹಣ ಜಮಾ ಆದಾಗಲು ವಾಯ್ಸ್ ಮೇಸೆಜ್ ಬರುತ್ತದೆ ಎಂದು ಮಾಹಿತಿ ನೀಡಿದರು.