ಟೊಮೇಟೊ ಹಣ್ಣನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಗೊತ್ತ? : ಟೊಮೇಟೊ ಹಣ್ಣಿನ ಮೂಲ ಇತಿಹಾಸ ಇಲ್ಲಿದೆ ನೋಡಿ…!!

You are currently viewing ಟೊಮೇಟೊ ಹಣ್ಣನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಗೊತ್ತ? : ಟೊಮೇಟೊ ಹಣ್ಣಿನ ಮೂಲ ಇತಿಹಾಸ ಇಲ್ಲಿದೆ ನೋಡಿ…!!

ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಟೊಮೇಟೊ ಮಾರಾಟವಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ಟೊಮೇಟೋ ಮಾಡಿದೆ. ಇತ್ತೀಚೆಗೆ ಒಂದು ಕೆಜಿ ಟೊಮೇಟೊಗೆ 150ಕ್ಕಿಂತಲೂ ಹೆಚ್ಚು ಬೆಲೆ ಇದೆ ಎನ್ನಲಾಗಿದೆ. ಇಂತಹ ಟೊಮೇಟೋ ಹಣ್ಣನ್ನು ನಾವು ನಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಮಾನ್ಯವಾಗಿ ನಾವು ಟೊಮೇಟೊ ಅಂತಲೂ ಕೆರಯುತ್ತೇವೆ. ಆದರೆ, ಅದರ ನಿಜವಾದ ಹೆಸರು ಇನ್ನೋಂದು ಇದ್ದು, ಟೊಮೇಟೊ ಹಣ್ಣನ್ನು “ಗೊರೆ ಹಣ್ಣು” ಎಂದು ಕರೆಯುತ್ತಾರೆ.

ಟೊಮೇಟೊ ಅಥವಾ ಗೂರೆ ಹಣ್ಣು ಇದರ ವೈಜ್ಞಾನಿಕ ಹೆಸರು ಸೊಲ್ಯಾನಮ್ ಲೈಕೋಪರ್ಸಿಕಮ್ ಎಂದು ಕರೆಯಲಾಗುತ್ತದೆ. ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ ಅಂತಲೂ ಹೇಳಲಾಗುತ್ತದೆ. ಮೂಲ-ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕದಲ್ಲಿ ಇದನ್ನು ಮೊದಲ ಬಾರಿಗೆ ಬೆಳೆದು ಅಡುಗೆಗೆ ಉಪಯೋಗಿಸಲಾಯಿತು.

ಈ ಟೊಮೇಟೋ ಹಣ್ಣನಿನ ವಿಶೇ‍ಷತೆ ಏನು ಗೊತ್ತ?

ಇದು ಅಲ್ಪಾಯುಶಿ ಗಿಡ-ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. 1-2 ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು, ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ.

✪ ಟೊಮೆಟೊಗಳನ್ನು ಅತ್ಯಂತ ಶಕ್ತಿಶಾಲಿ ಹಣ್ಣು ಎಂದು ನಾವು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ.

✪ ಈ ಟೊಮೆಟೊ ಹಣ್ಣನ್ನು ಪ್ರತಿನಿತ್ಯ ನಮ್ಮ ಊಟದಲ್ಲಿ ಸೇವಿಸಿದರೇ ಕ್ಯಾನ್ಸರ್ ತಡೆಗಟ್ಟುತ್ತದೆ ಜೊತೆಗೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಟೊಮೆಟೋ ಹಣ್ಣು ಬಹಳಷ್ಟು ಸಹಾಯಕಾರಿಯಾಗಿದೆ.

✪ ಟೊಮೆಟೋ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತಿಗೊಳ್ಳಬಹುದು. ಹೃದಯಕ್ಕೆ ಸಂಬಂಧಿಸಿದ ರೋಗವನ್ನು ತಡೆಯಲು ಈ ಟೊಮೆಟೋ ಕೆಲಸ ಮಾಡುತ್ತದೆ.

✪ ಟೊಮೆಟೋ ಸೇವನೆಯಿಂದ ಗರ್ಭಕೋಶದ ಆರೋಗ್ಯಕ್ಕೆ ಒಳ್ಳೆಯದು. ಟೊಮೆಟೋ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಟೊಮೇಟೋ ಹಣ್ಣಿನ ಆರಂಭಿಕ ಇತಿಹಾಸ ಹೀಗಿದೆ.

ಅಮೇರಿಕದ ಆಂಡ್ರ್ಯೂ ಎಫ್ ಸ್ಮಿತ್ ರವರ “ದಿ ಟೊಮೇಟೋ ಇನ್ ಅಮೇರಿಕ” ಎಂಬ ಪುಸ್ತಕದ ಪ್ರಕಾರ ಟೊಮೇಟೋ ದಕ್ಷಿಣ ಅಮೇರಿಕದ ಎತ್ತರ ಪ್ರದೇಶಗಳಿಂದ ಬಂದದ್ದು. ಆದರೆ, ಸ್ಮಿತ್ ಸ್ಪ್ಯಾನಿಶ್ ದಕ್ಷಿಣ ಅಮೇರಿಕದಲ್ಲಿ ಕಾಲಿಡುವ ಮುಂಚೆ ಟೊಮೇಟೋ ಕೃಷಿ ನಡೆಯುತ್ತಿದ್ದ ಬಗ್ಗೆ ಯಾವುದೇ ಪುರಾವೆಯೂ ಇಲ್ಲವೆಂದು ಕೂಡ ಅವರು ಆ ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ, ಇತರ ಸಂಶೋಧಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪೆರುವಿನಲ್ಲಿ ಈಗ ಕೃಷಿ ಮಾಡಲಾಗುವ ಹಣ್ಣುಗಳಿಗೂ ಹೆಚ್ಚಿನ ಐತಿಹಾಸಿಕ ಪುರಾವೆ ಇಲ್ಲದ್ದರಿಂದ. ಹೆಚ್ಚಿನ ಕೃಷಿ ಜ್ಞಾನ ಯೂರೋಪಿಯನ್ನರು ಬಂದ ಮೇಲೆ ನಶಿಸಿ ಹೋಯಿತಂತಿದೆ ಎಂದು ಅವರು ಹೇಳಿದ್ದಾರೆ.

ಅದೇನಿದ್ದರೂ, ಟೊಮೇಟೊ ಹೇಗೇ ದಕ್ಷಿಣ ಅಮೇರಿಕಕ್ಕೆ ಹೊರಗಿನಿಂದ ಬಂದಿದ್ದು ಎಂದು ಹೇಳಲಾಗುತ್ತದೆ. ಮಾಯಾ ಮತ್ತು ಇತರ ಪಂಗಡಗಳ ಜನ ಈ‌ ಹಣ್ಣನ್ನು ಅಡುಗೆಯಲ್ಲೂ ಉಪಯೋಗಿಸುತ್ತಿದ್ದರಂತೆ. ದಕ್ಷಿಣ ಮೆಕ್ಸಿಕೊದಲ್ಲಿ 19ನೇ ಶತಮಾನದಲ್ಲಿ ಇದನ್ನು ಬೆಳೆಸಲಾಗುತ್ತಿದ್ದರು ಎಂದು ಉಲ್ಲೇಖವಾಗಿದೆ.

Leave a Reply

error: Content is protected !!