ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬಹಳ ಮುಖ್ಯವಾದ ಯೋಜನೆಯೇ ಇದು ಎರಡನೇ ಗ್ಯಾರಂಟಿಯಾಗದ “ಗೃಹಜ್ಯೋತಿ ಯೋಜನೆ”ಯು ಕಳೆದ ತಿಂಗಳೂ ಜೂನ್.18ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿತ್ತು. ರಾಜ್ಯದ ವಿದ್ಯುತ್ ಗ್ರಾಹಕರು ಸೇವಾ ಕೇಂದ್ರಗಳು, ಮೊಬೈಲ್ ಮೂಲಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈವರೆಗೆ ಕೋಟಿ ಜನರ ನೋಂದಣಿ ಮೀರಲಾಗಿದೆ. ಹಾಗಾಗಿ ವೇಗವಾಗಿ ನೋಂದಣಿ ಮಾಡುವ ಉದ್ದೇಶದಿಂದ ಇನ್ಮುಂದೆ ಗ್ರಾಹಕರ ಮನೆಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಹೌದು, ಇನ್ಮುಂದೆ ಗ್ರಾಹಕರು ಇದ್ದಲ್ಲಿಗೆ ವಿದ್ಯುತ್ ಸರಬರಾಜು ಕಂಪನಿ ಅಂದರೆ ಎಸ್ಕಾಂಗಳು ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಿಕೊಳ್ಳಲಿವೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಮುಂದೆ ಅಗತ್ಯಬಿದ್ದರೇ ಗ್ರಾಹಕರಿದ್ದಲ್ಲಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಲಿವೆ ಎಂದು ಬಹುಮುಖ್ಯ ಮಾಹಿತಿ ಬಂದಿದೆ.
ಇನ್ನೂ ಗೃಹಜ್ಯೋತಿಗೆ ನೋಂದಣಿ ಪ್ರಾರಂಭಗೊಂಡು 23 ದಿನಗಳೇ ಕಳೆಯುತ್ತಿದ್ದು, ಪ್ರತಿ ನಿತ್ಯ 6 ರಿಂದ 8 ಲಕ್ಷ ಜನರು ಉಚಿತ ವಿದ್ಯುತ್ ಯೋಜನೆ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ ಎನ್ನುವ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ನೀರಸ ಪ್ರತಿಕ್ರಿಯೆ ಇರುವ ಕಡೆಗಳಿಗೆ ಗೃಹಜ್ಯೋತಿ ಸಿಬ್ಬಂದಿಗಳು ತೆರಳಿ ನೋಂದಣಿ ಮಾಡಲು ಚಿಂತನೆ ನಡೆದಿದೆ. ಅದು ಅಲ್ಲದೇ ಅಗತ್ಯಬಿದ್ದರೇ ಮನೆಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ವಿಚಾರವು ನಡೆಯುತ್ತದೆ. ಕೊನೆಯ ದಿನಾಂಕ ನಿಗದಿ ಪಡಿಸದೇ ಇರುವುದರಿಂದ ಸಾಕಷ್ಟು ಸಮಯವಿದೆ. ಇದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.