ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್, ಸಿನಿ ರಸಿಕರ ನೆಚ್ಚಿನ ನಟ ಹಾಗೂ ರಾಜಕುಮಾರ್ ಕುಟುಂಬದ ಮೇರು ಪ್ರತಿಭೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಇಂದು ಜನ್ಮದಿನ ವಿದ್ದು, ಅವರ ಅಸಂಖ್ಯಾತ ಅಭಿಮಾನಿಗಳು ಮತ್ತು ಅವರ ಕುಟುಂಬದವರು ನಟ ಶಿವರಾಜ್ ಕುಮಾರ್ ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಇಂದು ಶಿವರಾಜ್ ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಈ ಕುರಿತು ಶಿವಣ್ಣ ಟ್ವೀಟ್‌ನಲ್ಲಿ ಬರೆದಿದ್ದಾರೆ. “ನನ್ನ ಮುಂದಿನ ಚಿತ್ರ “45” !! ಪೋಸ್ಟರ್ ನಿಮಗಾಗಿ, ಅರ್ಜುನ್ ಜನ್ಯ ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ ಮಾಡುತ್ತಿದ್ದು, ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ ಅರ್ಜುನ್ ಜನ್ಯ, ಶಿವ ಕಾರ್ತೇಕೆಯನ್, ಪೃತ್ವಿ ಎಲ್ಲರಿಗೂ ಧನ್ಯವಾದಗಳು. ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರ್” ಎಂದು ತಮ್ಮ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.