ಕಲಾಪದಲ್ಲಿ ಶಾಲಾ ಮಕ್ಕಳ ಗಂಭೀರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ ಹೇಮಲತಾ ನಾಯಕ

You are currently viewing ಕಲಾಪದಲ್ಲಿ ಶಾಲಾ ಮಕ್ಕಳ ಗಂಭೀರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ ಹೇಮಲತಾ ನಾಯಕ

ಬೆಂಗಳೂರು : ವಿದಾನ ಪರಿಷತ್‌ನ ವಿಧಾನ ಮಂಡಲದ ಅಧಿವೇಶದಲ್ಲಿ ಇಂದು ನಡೆದ ಶೂನ್ಯ ವೇಳೆಯ ಕಲಾಪದಲ್ಲಿ ಕೊಪ್ಪಳ-ರಾಯಚೂರಿನ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಶಾಲಾ ಮಕ್ಕಳ ಮೂಲಭೂತ ಗಂಭೀರ ಸಮಸ್ಯೆಯಾದ ಶೌಚಾಲಯದ ಕುರಿತು ಪ್ರಶ್ನೆ ಕೇಳುವ ಮೂಲಕ ಗಮನ ಸೆಳೆದರು.

ಕಳೆದ ಜುಲೈ 11 ರಂದು ಪತ್ರಿಕೆಯೊಂದರ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಹೇಮಲತಾ ನಾಯಕ ಅವರು, “ಗದಗ ಜಿಲ್ಲೆಯ ಮಾತ್ರವಲ್ಲದೇ ಸಾಕಷ್ಟು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶೌಚಾಲಯಗಳಿಲ್ಲದೇ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೇ ಮಕ್ಕಳು ಸಾಂಕ್ರಾಮಿಕ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗುತ್ತಿಲ್ಲ. ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಇಲ್ಲ. ಶೌಚಾಲಯಗಳಿರುವ ಶಾಲೆಗಳಲ್ಲಿ ಅವುಗಳ ನಿರ್ವಹಣೆ ಅತ್ಯಂತ ಕೆಟ್ಟದಾಗಿದ್ದು, ಕಾಲಿಡಲು ಸಾಧ್ಯವಾಗದಷ್ಟರ ಮಟ್ಟಿಗೆ ಹಾಳಾಗಿವೆ” ಎಂದು ಬೇಸರ ವ್ಯಕ್ತಪಡೆಸಿದರು.

“ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲೂ ಶೌಚಾಲಯ ಕಡ್ಡಾಯವಾಗಿ ಇರಲೇಬೇಕು. ಆದರೆ ಅವುಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಕಿಡಿಗೇಡಿತನ ಒಂದು ಕಡೆಯಾದರೆ, ಇನ್ನುಳಿದ ಕಡೆಗಳಲ್ಲಿ ಮಕ್ಕಳು ಬಳಸುವ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರು ಯಾರು? ಎಂಬ ಪರಿಸ್ಥಿತಿ ಇದೆ” ಎಂದು ಕಲಾಪಕ್ಕೆ ತಿಳಿಸಿದರು.

“ಆದ ಕಾರಣ ಈ ಕೆಲಸಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಸ್ಥಳೀಯ ಎಸ್.ಡಿ.ಎಂ.ಸಿ ಸಮಿತಿಯೊಂದಿಗೆ ಸಭೆ ನಡೆಸುವಂತೆ ಸಲಹೆ ನೀಡಿದ್ದರೂ ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ಜವಾಬ್ದಾರಿ ಅದರಂತೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಕ್ಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಇಲಾಖೆ ಸೂಕ್ತ ಕ್ರಮಗಳನ್ನು ಕೈಗೂಳ್ಳಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ” ಎಂದು ಹೇಳಿದರು.

Leave a Reply

error: Content is protected !!