BIG BREAKING : ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಮರ್ಮಾಘಾತ.!!

You are currently viewing BIG BREAKING : ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಮರ್ಮಾಘಾತ.!!

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್‌ಎಸ್‌ಎಸ್‌ಗೆ ಮರ್ಮಾಘಾತ ನೀಡಿದೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ವಾರದಲ್ಲಿ ಮಂಜೂರಾಗಿದ್ದ ಭೂಮಿಯ ಹಸ್ತಾಂತರಕ್ಕೆ ತಡೆ ನೀಡಿ ಶಾಕ್‌ ಕೊಟ್ಟಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌)ಗೆ ಬೆಂಗಳೂರಿನ ಕುರುಬರಹಳ್ಳಿ ಬಳಿಯಲ್ಲಿ ಬರೋಬ್ಬರಿ 35.33 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸೆಪ್ಟೆಂಬರ್ ನಲ್ಲಿ ಗೋಮಾಳ ಭೂಮಿ RSSಗಾಗಿ ಮಂಜೂರು ಮಾಡಿ, ಹಸ್ತಾಂತರ ಕೆಲಸ ಮಾತ್ರ ಬಾಕಿ ಉಳಿಸಲಾಗಿತ್ತು. ಇದೀಗ ಕುರುಬರಹಳ್ಳಿ ಬಳಿ 35.33 ಎಕರೆ ಆರ್‌ಎಸ್‌ಎಸ್‌ ಗಾಗಿ ಮಂಜೂರು ಮಾಡಿದ್ದ ಭೂಮಿ ಹಸ್ತಾಂತರಕ್ಕೆ ಇದೀಗ ಕಾಂಗ್ರೆಸ್ ಸರ್ಕಾರ ತಡೆ ನೀಡಿದೆ.

ಈ ಕುರಿತು ಇಂದು ವಿಧಾನಸಭೆಯಲ್ಲಿ ಶಾಸಕ ಎಸ್.ಟಿ ಸೋಮಶೇಖರ್ ಕೇಳಿದಂತ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರಿಸಿದ್ದು, “ಆರ್ ಎಸ್ ಎಸ್ ಗೆ ಮಂಜೂರಾಗಿದ್ದಂತ ಗೋಮಾಳ ಭೂಮಿ ಹಸ್ತಾಂತರಕ್ಕೆ ತಡೆ ನೀಡಲಾಗಿದೆ. ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!