ದೆಹಲಿ: ದೇಶದ ರಾಜಧಾನಿಗೆ ಮಹಾ ಗಂಡಾಂತರ ಒದಗಿ ಬಂದಿದ್ದು, ಅಲ್ಲಿನ ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಜನ ಜೀವನಕ್ಕೆ ಭಾರೀ ಆತಂಕ ಎದುರಾಗಿದೆ. ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನವದೆಹಲಿಯ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಅದೇ ರೀತಿಯಲ್ಲಿ ದೇಹಲಿಯ ಐಟಿಒ ರಸ್ತೆಯಲ್ಲಿ ಜಲಾವೃತವಾಗಿರುವ ಕಾರಣ ಅಲ್ಲಿನ ಪ್ರಯಾಣಿಕರು ಸಂಚಾರವಿಲ್ಲದೇ ಭಾರೀ ಸಮಸ್ಯೆ ಎದುರಿಸುತ್ತಿದ್ದು, ಇದೀಗ ವಿಡಿಯೋ ಒಂದನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
BREAKING : ರಾಜಧಾನಿಗೆ ಮಹಾ ಗಂಡಾಂತರ : ಜನ ಜೀವನ ಅಸ್ಥವ್ಯಸ್ಥ!

- Post author:Prajavikshane
- Post published:15/07/2023 7:44 am
- Post category:Breaking News / ರಾಷ್ಟ್ರೀಯ
- Post comments:0 Comments
- Reading time:1 mins read