ನಾಳೆಯಿಂದ ರಾಜಧಾನಿಯಲ್ಲಿ ಎರಡು ದಿನ ಮಹತ್ವದ “ಮಹಾ ಮೈತ್ರಿಕೂಟ ಸಭೆ” : ಭಾಗಿಯಾಗಲಿದ್ದಾರೆ ಈ ನಾಯಕರು..!!

You are currently viewing ನಾಳೆಯಿಂದ ರಾಜಧಾನಿಯಲ್ಲಿ ಎರಡು ದಿನ ಮಹತ್ವದ “ಮಹಾ ಮೈತ್ರಿಕೂಟ ಸಭೆ” : ಭಾಗಿಯಾಗಲಿದ್ದಾರೆ ಈ ನಾಯಕರು..!!

ಬೆಂಗಳೂರು : ನಾಳೆ, ನಾಡಿದ್ದು (ಜುಲೈ 17 ಮತ್ತು 18) ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ (INC) ಕರೆದಿರುವ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ಹಾಗಾದರೆ, ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆ ನಗರದ ಖಾಸಗಿ ಹೋಟೆಲ್ ನಲ್ಲಿ ಮಹತ್ವದ “ಮಹಾ ಮೈತ್ರಿಕೂಟ ಸಭೆ” ನಡೆಯಲಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ನಾಳೆಯ ಸಭೆಯಲ್ಲಿ ಭಾಗವಹಿಸಲಿರುವ ನಾಯಕರಿಗೆ ಮಾಡಿದ ವ್ಯವಸ್ಥೆಗಳನ್ನು ಈಗಾಗಲೇ ಪರಿಶೀಲಿಸಿ ನೋಡಿಕೊಳ್ಳುತ್ತಿದ್ದಾರೆ. ಕಳದ ಜೂನ್ 23 ರಂದು ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದ ಸಭೆಯ ಬಳಿಕ ಇದು 2ನೇ ವಿರೋಧ ಪಕ್ಷಗಳ ಸಭೆಯಾಗಿದೆ.

ನಾಳೆ ಹಾಗೂ ನಾಡಿದ್ದು ಇಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸುವವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಪಟ್ಟಿ ಬಿಡುಗಡೆ ಮಾಡಿದ್ದು,

ನಾಳೆ “ಮಹಾ ಮೈತ್ರಿಕೂಟ ಸಭೆ”ಯಲ್ಲಿ ಈ ನಾಯಕರು ಭಾಗಿಯಾಗಲಿದ್ದಾರೆ.

1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ :- ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್
2. ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ :– ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂಸದ ಅಭಿಷೇಕ್ ಬ್ಯಾನರ್ಜಿ, ಸಂಸದ ದೀರೇಕ್ ಓ ಬಿರಿಯನ್
3. ಕಮ್ಯೂನಿಷ್ಠ್ ಪಾರ್ಟಿ ಆಪ್ ಇಂಡಿಯಾ :- ಮಾಜಿ ಸಂಸದ ಡಿ.ರಾಜ
4. ಕಮ್ಯೂನಿಷ್ಟ್ ಪಾರ್ಟಿ ಆಪ್ ಇಂಡಿಯಾ(ಎಂ) :– ಮಾಜಿ ಸಂಸದ ಸೀತಾರಾಮ ಯಚೂರಿ
5. ನ್ಯಾಷನಲ್ ಕಾಂಗ್ರೆಸ್ ಪಾರ್ಟಿ :– ಸಂಸದ ಶರದ್ ಪವಾರ್, ಶಾಸಕ ಜಿತೇಂದ್ರ ಅಹವಾಲ್, ಸಂಸದೆ ಸುಪ್ರಿಯಾ ಸುಲೆ
6. ಜನತಾ ದಳ ( ಯನಿಟೆಡ್) :– ಬಿಹಾರ ಸಿಎಂ ನಿತೀಶ್ ಕುಮಾರ್, ಸಂಸದ ಲಲ್ಲ ಸಿಂಗ್, ಸಚಿವ ಸಂಜಯ್ ಕುಮಾರ್ ಜಾ.
7. ಡಿಎಂಕೆ :– ತಮಿಳುನಾಡು ಸಿಎಂ ಎ.ಕೆ ಸ್ಟಾಲಿನ್, ಸಂಸದ ಟಿಆರ್ ಬಾಲು
8. ಎಎಪಿ :– ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
9. ಜಾರ್ಖಂಡ್ ಮುಕ್ತಿ ಮೋರ್ಚಾ :– ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್
10. ಶಿವಸೇನೆ :– ಮಾಜಿ ಸಿಎಂ ಉದ್ದವ್ ಠಾಕ್ರೆ, ಶಾಸಕ ಆದಿತ್ಯಾ ಠಾಕ್ರೆ, ಸಂಸದ ಸಂಜಯ್ ರಾಹುತ್
11. ರಾಷ್ಟ್ರೀಯ ಜನತಾ ದಳ :– ಲಾಲು ಪ್ರಸಾದ್ ಯಾದವ್, ಡಿಸಿಎಂ ತೇಜಸ್ವಿ ಯಾದವ್, ಸಂಸದ ಮನೋಜ್ ಜಾ, ಸಂಜಯ್ ಯಾದವ್
12. ಸಮಾಜವಾದಿ ಪಾರ್ಟಿ :– ಮಾಜಿ ಸಿಎಂ ಅಭಿಷೇಕ್ ಯಾದವ್, ಸಂಸದ ಪ್ರೊ.ರಾಮಗೋಪಾಲ್ ಯಾದವ್, ಸಂಸದ ಜಾವೇದ್ ಆಲಿಖಾನ್, ಲಾಲ್ ಜಿ ವರ್ಮಾ, ರಾಮ್ ಅಚಲ್ ರಾಜ್ ಬಹದೂರ್, ಅಷಿಶ್ ಯಾದವ್.
13. ಜೆ ಅಂಡ್ ಕೆಎನ್ಸಿ :– ಮಾಜಿ ಸಿಎಂ ಓಮರ್ ಅಬ್ದುಲ್ಲಾ
14. ಜೆ ಅಂಡ್ ಕೆ ಪಿಡಿಪಿ ;– ಮಾಜಿ ಸಿಎಂ ಮೆಹಬೂಬ್ ಮಪ್ತಿ
15. ಸಿಪಿಐ (ಎಂಎಲ್) :– ದೀಪಂಕರ್ ಭಟ್ಟಾಚಾರ್ಯ.
16. ಆರ್ ಎಲ್ ಡಿ :– ಸಂಸದ ಜಯಂತ್ ಸಿಂಗ್ ಚೌಧರಿ
17. ಐಯುಎಂಎಲ್ :- ಕೆ.ಎಂ ಕದೀರ್ ಮೊಹಿದ್ದೀನ್, ಮಾಜಿ ಸಂಸದ ಪಿ.ಕೆ ಕುನಲಿಕುಟ್ಟಿ.
18. ಕೇರಳ ಕಾಂಗ್ರೆಸ್ (ಎಂ) :– ಜೋಷಿ ಕೆ ಮಣಿ
19. ಎಂಎಂಕೆ :– ಸಂಸದ ತಿರು ವೈಕೋ, ಜಿ.ರೇಣುಗದೇವಿ.
20. ವಿಸಿಕೆ :– ತಿರು ತೊಲ್ ತಿರುಮವಲನ್, ಸಂಸದ ರವಿ ಕುಮಾರ್.
21. ಆರ್ ಎಸ್ ಪಿ :– ಸಂಸದ ಎನ್ ಕೆ ಪೆರುಚಂದ್ರನ್.
22. ಕೇರಳ ಕಾಂಗ್ರೆಸ್ :– ಪಿ.ಜೆ ಜೋಸೆಪ್, ಫ್ರಾನ್ಸಿಸ್ ಜಾರ್ಜ್.ಕೆ
23. ಕೆಎಂಡಿಕೆ :– ಶಾಸಕ ತಿರು ಇ.ಕೆ ಈಶ್ವರನ್, ಸಂಸದ ಎ ಕೆ ಪಿ ಚಿಂರಾಜ್.
24. ಎಐಎಫ್ ಬಿ :- ಜಿ ದೇವರಾಜನ್.

Leave a Reply

error: Content is protected !!