ಶೀಘ್ರದಲ್ಲಿ ಕುಕನೂರು ಪಟ್ಟಣದಲ್ಲಿ ಕೋರ್ಟ ಆರಂಭ


ಕುಕನೂರು : ಪಟ್ಟಣವು ತಾಲೂಕ ಕೇಂದ್ರವಾಗಿ ಪಟ್ಟಣದಲ್ಲಿ ತಹಶೀಲ್ದಾರ್ ಕಾರ್ಯಾಲಯ ಹಾಗೂ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಸಹಿತ ಕೋರ್ಟ ಕೆಲಸಗಳಿಗೆ ದೂರದ ಯಲಬುರ್ಗಾ ಪಟ್ಟಣಕ್ಕೆ ಹೋಗಬೇಕಿತ್ತು ಆದರೆ ಇನ್ನು ಮುಂದೆ ಕೋರ್ಟ ಕೆಲಸಗಳಿಗೆ ಯಲಬುರ್ಗಾ ಪಟ್ಟಣಕ್ಕೆ ಹೋಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಕುಕನೂರು ಪಟ್ಟಣದಲ್ಲಿಯೇ ಕೋರ್ಟ ನಿರ್ಮಾಣವಾಗಿದ್ದು ಇನ್ನು ಮುಂದೆ ಇಲ್ಲಯೇ ಕಾರ್ಯನಿರ್ವಹಿಸಲಿದೆ.
ಪಟ್ಟಣದ ತಹಶೀಲ್ದಾರ್ ಕಾರ್ಯಲಯದ ಹಿಂದುಗಡೆ ಇರುವ ಕಟ್ಟಣದಲ್ಲಿ ಕೋರ್ಟನ್ನು ಪ್ರಾರಂಭಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿದ್ದು ಸ್ಥಳಕ್ಕೆ ರವಿವಾರ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ವಿ ಶ್ರೀಶಾನಂದ ಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಕನೂರು ಪಟ್ಟಣದಕ್ಕೆ ಕೋರ್ಟ ಅವಶ್ಯಕತೆ ಇದ್ದು, ಕೋರ್ಟ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳು ಲಭ್ಯವಿದ್ದು ಆದಷ್ಟು ಬೇಗೆ ಪಟ್ಟಣದಲ್ಲಿ ವಾರದ ೨ ದಿನ ಕೋರ್ಟ ಕಾರ್ಯ ಪ್ರಾರಂಬಿಸಲಿದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಸಾಕಷ್ಟು ಅನೂಕಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಯಲಬುರ್ಗಾ ನ್ಯಾಯಾಲಯದ ನ್ಯಾಧೀಶರು, ಜಿಲ್ಲಾಢಳಿತ ಅಧಿಕಾರಿಗಳು, ಕುಕನೂರು ತಹಶೀಲ್ದಾರರು, ಕಂದಾಯ ನೀರಿಕ್ಷಕರು ಮತ್ತು ಕುಕನೂರು, ಯಲಬುರ್ಗಾ ವಕೀಲರ ಸಮಿತಿ ಸದಸ್ಯರು ಹಾಗೂ ಇತರರಿದ್ದರು

Leave a Reply

error: Content is protected !!