ಬೆಂಗಳೂರು: ಇಂದು ವಿಧಾನ ಸಭಾ ಕಲಾಪದಲ್ಲಿ ಡೆಪ್ಯುಟಿ ಸ್ಪೀಕರ್ ಮೇಲೆ ವಿಧೇಯಕವನ್ನು ಬಿಜೆಪಿ ಶಾಸಕರು ಹರಿದು ಮುಖದ ಮೇಲೆ ಎಸೆದ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ 10 ಶಾಸಕರನ್ನು ಅಮಾನತು ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವಿಧಾನ ಸಭೆಯಿಂದ ಶಾಸಕರಾದ ಆರ್ ಅಶೋಕ್, ಭರತ್ ಶೆಟ್ಟಿ , ಅಶ್ವಥ್ ನಾರಾಯಣ, ಅರವಿಂದ ಬೆಲ್ಲದ್ ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ವೇದವ್ಯಾಸ್ ಕಾಮತ್, ಧೀರಜ್ ಮುನಿರಾಜು ಸೇರಿ ಹತ್ತು ಬಿಜೆಪಿ ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾಗಿದೆ.
ವಿಧಾನ ಸಭಾ ಕಲಾಪದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಯಲ್ಲಿ ಬಿಜೆಪಿ ಶಾಸಕರು ಅಮಾನತ್ತಾಗಿದ್ದಾರೆ. ನಾಳೆ ಮತ್ತು ನಾಡಿದ್ದು ಇನ್ನೂ ಎರಡು ದಿನ ಬಾಕಿ ಇರುವ ಅಧಿವೇಶನದಿಂದ ಮೇಲಿನ 10 ಶಾಸಕರನ್ನು ಅಧಿವೇಶನದಿಂದ ಹೊರಗಿಡಲಾಗಿದೆ ಎಂದು ಸ್ವೀಕರ್ ತಿಳಿಸಿದ್ದಾರೆ.