Local Express : ಕ್ಷಯ ರೋಗಮುಕ್ತ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸಿ : ವೈಧ್ಯಾಧಿಕಾರಿ ಚೇತನ್‌ ಕಲ್ಲೂರು

You are currently viewing Local Express : ಕ್ಷಯ ರೋಗಮುಕ್ತ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸಿ : ವೈಧ್ಯಾಧಿಕಾರಿ ಚೇತನ್‌ ಕಲ್ಲೂರು

ಕುಕನೂರು : ತಾಲೂಕಿನ ಬೆಣಕಲ್‌ ಗ್ರಾಮದ ನೃಪತುಂಗ ಪ್ರೌಢ ಶಾಲೆಯಲ್ಲಿ, ಶಾಲಾ ಮಕ್ಕಳಿಗಾಗಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯಿಂದ ಎರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಚೇತನ್‌ ಕಲ್ಲೂರು ಮಾತನಾಡಿ ರಕ್ತ ಹೀನತೆಯು ಹಲವಾರು ರೋಗಗಳನ್ನು ಉಲ್ಬಣಿಸಲು ಕಾರಣವಾಗುತ್ತದೆ, ಅದಕ್ಕಾಗಿ ವಿಧ್ಯಾರ್ಥಿಗಳು ಪೌಷ್ಠಿಕ ಆಹಾರ ಸೇವನೆ, ಶೌಚಾಲಯಗಳ ಬಳಕೆ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಕರೀದ ಪದಾರ್ಥಗಳು, ಹೋಟಲ್‌ ತಿಂಡಿಗಳಿಂದ ದೂರವಿರಬೇಕು ಎಂದರು ಮುಟ್ಟಿನ ಸಮಯದಲ್ಲಿ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಶುಚಿ ಪ್ಯಾಡ್‌ ಗಳ ಬಳಕೆ ಮಾಡಬೇಕು ಮುಖ್ಯವಾಗಿ ಸಮುದಾಯದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬೇಕೆಂದು ಆರೋಗ್ಯ ಇಲಾಖೆಯಿಂದ ಗುರಿ ಹೊಂದಲಾಗಿದ್ದು ಅದಕ್ಕಾಗಿ 2-3 ವಾರದಿಂದ ಕೆಮ್ಮು, ಜ್ವರದಂತಹ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಬೇಕು ಒಂದು ವೇಳೆ ಕ್ಷಯ ರೋಗ ಪತ್ಯೆಯಾದರೆ. ಕ್ಷಯ ರೋಗವನ್ನು ಪತ್ಯಹಚ್ಚಲು ಸಹಕರಿಸಿದವರಿಗೆ ರೂ. 500 ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಮತ್ತು ಕ್ಷಯ ರೋಗ ಪೀಡಿತ ವ್ಯಕ್ತಿಯ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆಯಿಂದಲೇ ಮಾಡಲಾಗುತ್ತದೆ ಎಂದರು.

ಬಳಿಕ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ, “ಇಂದಿನ ಮಕ್ಕಳೇ ಇಂದಿನ ನಾಗರೀಕರು, ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಗ್ರಾಮ ಪಂಚಾಯತಿಯಿಂದ ಎಲ್ಲರ ಮನೆ ಮನೆಗೆ ಶೌಚಾಲಯವನ್ನು ನಿರ್ಮಿಸಲಾಗಿದೆ ಅವುಗಳನ್ನು ಪ್ರತಿನಿತ್ಯ ಬಳಸಬೇಕು, ವಯಸ್ಕ ಹೆಣ್ಣು ಮಕ್ಕಳು ಶುಷಿ ಪ್ಯಾಡ್‌ ಗಳನ್ನು ಬಳಕೆ ಮಾಡಬೇಕು, ಬಳಕೆ ಮಾಡಿದ ಪ್ಯಾಡ್‌ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ವಚ್ಚ ವಾಹಿನಿಯಲ್ಲಿ ಅಳಡಿಸಿರುವ ಶುಚಿ ಪ್ಯಾಡ್‌ ಸಂಗ್ರಹಣಾ ಚೀಲದಲ್ಲಿ ಹಾಕಬೇಕು ನಂತರ ಅವುಗಳನ್ನು ಇನ್ಸಿನೇಟರ್‌ ಗಳಲ್ಲಿ ವೈಜ್ಞಾನಿಕವಾಗಿ ಸುಡಲಾಗುತ್ತದೆ” ಎಂದರು.

ಕೆ.ಎಚ್.ಪಿ.ಟಿ ಸಂಯೋಜಕ ರಫಿಕ್‌ ಮಾತನಾಡಿ, “ಎಲ್ಲಾ ಶಾಲೆಗಳಲ್ಲಿ ಶಾಲಾ ವಿಧ್ಯಾರ್ಥಿಗಳ ಸಂಸತ್ತನ್ನು ರಚನೆ ಮಾಡಲಾಗಿದೆ. ಮುಖ್ಯವಾಗಿ ವಿಧ್ಯಾರ್ಥಿಗಳ ಶಾಲಾ ಸಂಸತ್ತಿನಲ್ಲಿ ಆರೋಗ್ಯ ಮಂತ್ರಿಗಳಾದಂತಹ ವಿಧ್ಯಾರ್ಥಿಯು ಎಲ್ಲಾ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲಾ ವಿಧ್ಯಾರ್ಥಗಳನ್ನು ಆರೋಗ್ಯ ಕೇಂದ್ರಕ್ಕೆ ತಿಂಗಳಿಗೆ ಒಂದು ದಿನ ಸಮಯ ನಿಗದಿಪಡಿಸಿಕೊಂಡು ಭೇಟಿ ನೀಡಬೇಕು” ಎಂದರು.

ಈ ಸ್ಥಳದಲ್ಲಿ ನೃಪತುಂಗ ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ ಬಳಗೇರಿ. ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳಾದ ಮಾರುತಿ ಗೊಂಡಬಾಳ, ಸಿ.ಎಚ್.ಓ ಶಂಭು ಟಿ, ಆರ್.ಕೆ.ಎಸ್.ಕೆ ಆಪ್ತಸಮಾಲೋಚಕರಾದ ಕಳಕಪ್ಪ ಬಂಡಿ ಶಾಲಾ ವಿಧ್ಯಾರ್ಥಿಗಳು ಇದ್ದರು.

Leave a Reply

error: Content is protected !!