ಮೈಸೂರು : ರಾಜ್ಯದಲ್ಲಿ ಈಗಾಗಲೇ ಜನರು ದಿನನಿತ್ಯ ಬಳಕೆ ಮಾಡುವ ಅಗತ್ಯವಾದ ಟೊಮೆಟೊ ಹಾಗೂ ನಂದಿನಿ ಹಾಲಿನ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ನಂದಿನಿ ಹಾಲು ಖರೀದಿ ದರದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಾಲು ಒಕ್ಕೂಟ ದ ಆದೇಶದ ಪ್ರಕಾರ ಹಾಲಿನ ಶೇಖರಣೆ ಶೇಕಡ 6 ರಷ್ಟು ಹೆಚ್ಚಳ ವಾದ್ದರಿಂದ ಹಿನ್ನೆಲೆಯಲ್ಲಿ ರೈತರಿಗೆ ನೀಡುವ ದರದಲ್ಲಿ ಸುಮಾರು 1.50 ರೂ. ಕಡಿತ ಮಾಡಲಾಗಿದೆ ಎಂದು ಈ ಒಕ್ಕೂಟ ತಿಳಿಸಿದೆ. ಆರ್ಥಿಕ ಹೊರೆ ಸರಿದೂಗಿಸಲು ಹಾಲಿನ ದರದ ಪರಿಷ್ಕರಣೆ ಮಾಡಲಾಗಿದೆ. ಹಾಗೂ ರೈತರಿಗೆ ಕೇವಲ 31.52 ಪೈಸೆ ಮಾತ್ರ ಸಂದಾಯವಾಗಲಿದೆ ಎಂದು ಒಕ್ಕೂಟ ಹೇಳಿದೆ.