ಕೋಲಾರ್ : ಕಾಂಗ್ರೆಸ್ ಸರ್ಕಾರ ಡಿಸೆಂಬರ್ ತಿಂಗಳ ಅಷ್ಟೊತ್ತಿಗೆ ಪತನವಾಗಲಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನವರು ಅವರದೇ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ ಡಿಕೆ ಶಿವಕುಮಾರ್ ಬಣ ಡಾ. ಜಿ ಪರಮೇಶ್ವರ್, ಬಿಕೆ ಹರಿಪ್ರಸಾದ್ ಬಣ, ಒಟ್ಟು ಕಾಂಗ್ರೆಸ್‌ನಲ್ಲಿ ಇದೀಗ ನಾಲ್ಕು ಬಣಗಳಿವೆ. ರಾಜ್ಯ ಸರ್ಕಾರದಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ಪಕ್ಷದೊಳಗೆ ಬೆಂಕಿ ಹತ್ತಿಕೊಂಡಿದೆ. ಆದ್ದರಿಂದ ಡಿಸೆಂಬರ್ ಅಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದರು.
ವರದಿ : ಚಂದ್ರು ಆರ್. ಭಾನಾಪೂರ್