ರಾಯಚೂರು: ನಗರದಲ್ಲಿ ಕಳೆದ ಜುಲೈ.18ರಂದು ನಡೆದಿದ್ದ ಭೀಕರ ಅಪಘಾತವು ಇಂದು ತಡವಾಗಿ ಬೆಳಕಿಗೆ ಬಂದಿದ್ದು, ಬೈಕ್ ಸವಾರನ ಎಡವಟ್ಟಿನಿಂದಾಗಿ ಕಾರೊಂದು ಡಿಕ್ಕಿಯಾದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ, ವಿದ್ಯಾರ್ಥಿನಿಯರು ಹಾರಿ ಬಿದ್ದಿರುವ ಭಾರೀ-ಭೀಕರ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಶ್ರೀರಾಮಮಂದಿರ ರಸ್ತೆಯಲ್ಲಿ ವಿದ್ಯಾರ್ಥಿನಿಯರು ತಮ್ಮ ಪಾಡಿಗೆ ತಾವು ರಸ್ತೆ ಬದಿಯಲ್ಲಿ ನಡೆದುಕೊಂಡು (ಜುಲೈ.18ರಂದು) ಹೋಗುತ್ತಿದ್ದಾರೆ. ಅದೇ ಸಮಯದಲ್ಲಿ ಕಾರೊಂದು ಬರೋದನ್ನು ಗಮನಸಿದಂತ ಬೈಕ್ ಸವಾರನೊಬ್ಬ ದಿಢೀರ್ ಯೂಟರ್ನ್ ತೆಗೆದುಕೊಂಡಿದ್ದು, ಇದೇ ವೇಳ ಬೈಕ್ ಸವಾರನಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಆಗದಂತ ಕಾರು ಚಾಲಕ, ಬೈಕ್ ಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದಂತ ವಿದ್ಯಾರ್ಥಿನಿಯರಿಗೂ ಡಿಕ್ಕಿ ಹೊಡೆದಿದ್ದಾನೆ. ಕಾರು ಢಿಕ್ಕಿಯಾದ ರಭಸಕ್ಕೆ, ಬೈಕ್ ಸವಾರ ಹಾಗೂ ವಿದ್ಯಾರ್ಥಿನಿಯ ಮೇಲಕ್ಕೆ ಹಾರಿ ಕೆಳಗೆ ಬಿದ್ದಿರೋದು ಭೀಕರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತಿಳಿದು ಬಂದಿದೆ.
ಸದ್ಯ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯವಾಗಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ರೆ ಎಂದು ತಿಳಿದು ಬಂದಿದೆ.