ಕೊಪ್ಪಳ : ಕೊಪ್ಪಳ ತಾಲೂಕಿನ ಹೊಸಲಿಂಗಪುರ ಗ್ರಾಮದಲ್ಲಿನ ಕಾಲುವೆ ಸೇತುವೆ ಶ್ರೀಕ್ಷೇತ್ರ ಹುಲಿಗಿ ಮತ್ತು ಹೊಸಪೇಟೆ ಮಾರ್ಗದಲ್ಲಿ ರಸ್ತೆ ಗುಂಡಿ ಬಿದ್ದು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವಂತ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಾಗೂ ವಿವಿಧ ಶಾಲೆಗಳಿಗೆ ತೆರಳು ಶಾಲಾಮಕ್ಕಳಿಗೂ ಈ ರಸ್ತೆ ಗುಂಡುಗಳು ಅಪಾಯ ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೊಸಲಿಂಗಪುರ ಹಾಗೂ ಸುತ್ತಲಿನ ಗ್ರಾಮದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಈ ಕಾರಣ ಸದರಿ ರಸ್ತೆಯನ್ನು ದುರಸ್ಥಿ ಮಾಡಬೆಕೇಂದು ಗ್ರಾಮಸ್ತರು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಯಾರು ಗಮನಹರಿಸುತ್ತಿಲ್ಲ, ಈಗಾಗಲೇ ಸಾಕಷ್ಟು ಬಾರಿ ಅವರ ಗಮನಕ್ಕೆ ತಂದರು ಸಹ ಬೇಜವಾಬ್ದಾರಿ ತೊರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಮಾಡದಿದ್ದರೆ, ಶೀರ್ಘದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ವಸಂತ ನಾಯಕ್ ರಾಮು ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಆಟೋ ಚಾಲಕರಾದ ರಿಯಾಜ್ ಶಂಕರ್, ಶ್ರೀನಿವಾಸ್ ಗೋಣೆಪ್ಪ, ರಮೇಶ್, ಮಂಜು, ವಾಸು, ಕುಮಾರಪ್ಪ, ರಾಮ ಇದ್ದರು.