ಕೊಪ್ಪಳ : ತಾಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಿಶಿಷ್ಟ ಪಂಗಡದ ಭೂಮಿ ಸರ್ವೆ ನಂ. 22ರಲ್ಲಿ 50 ಎಕರೆ ಭೂಮಿಯನ್ನು ಎಚ್.ಆರ್.ಜಿ. ಅಲಾಯನ್ಸ್ ಸ್ಟೀಲ್ ಪ್ರೈ.ಲಿ. ಸ್ಥಾಪಿಸಿದ ಕಾರ್ಖಾನೆಯಲ್ಲಿ ಭೂಮಿ ಕಳೆದುಕೊಂಡ ವಾಲ್ಮೀಕಿ ಸಮಾಜದವರನ್ನು ಕೆಲಸಕ್ಕೆ ಸೇರಿಸಲು ಇಂದು ಕೊಪ್ಪಳ ತಹಶೀಲ್ದಾರ್‌ಗೆ ಕೊಪ್ಪಳ ಜಿಲ್ಲಾ ವಾಲ್ಮೀಕಿ ಸಮಾಜದ ಮುಂಖಡರು ಮನವಿ ಸಲ್ಲಿಸಿದರು.
ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮಾಜದ ಭೂಮಿ ಸರ್ವೆ ನಂ 22 ಸ್ಥಾಪಿಸಿದ ಎಚ್.ಆರ್.ಜಿ. ಅಲಾಯನ್ಸ್ ಸ್ಟೀಲ ಶೈಲಿ ನವರು ಕಳೆದ 2011ರಲ್ಲಿ ಸುಮಾರು ಸ್ವಂತ ಭೂಮಿಯನ್ನು 50 ಎಕರೆ ಕಾರ್ಖಾನೆಗೆ ಅಲ್ಲಿನ ರೈತರು ತಮ್ಮ ಜಮಿನನ್ನು ನೀಡಿದ್ದಾರೆ. ಜಮಿನು ಹಸ್ತಾಂತರ ವೇಳೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡುವುದಾಗಿ ಆಶ್ವಾಸನ ನೀಡಿದ್ದರು ಎಂದು ರೈತರು ತಿಳಿಸಿದ್ದಾರೆ.
ಇದೀಗ ಬರೋಬ್ಬರಿ 13 ರಿಂದ 14 ವರ್ಷಗಳು ಗತಿಸಿಹೊಗಿದೆ ಆದರೂ ಭೂಮಿ ಕಳೆದುಕೊಂಡ ರೈತರುಗಳಾದ ಕರಿಯಪ್ಪ ಪೂಜಾರ, ರಂಗಪ್ಪ ಪೂಜಾರ, ಹನುಮಂತ ಪೂಜಾರ, ಯಂಕಪ್ಪ ಪೂಜಾರ, ಹನುಮಪ್ಪ ಪೂಜಾರ, ಶಿವಪ್ಪ ಪೂಜಾರ, ಶ್ರೀನಿವಾಸ ಬಿಲ್ಲಗಾರ, ಮಂಜುನಾಥ ಪೂಜಾರ, ಶಿವರಾಮಪ್ಪ ಪೂಜಾರ, ಪರಸಪ್ಪ ಪೂಜಾರ ಇವರುಗಳಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡುವದಾಗಿ ನಂಬಿಸಿ 1 ರಿಂದ 2 ವರ್ಷದವರೆಗೆ ಕೆಲಸಕೊಟ್ಟು ಸ್ವಲ್ಪದಿನ ದುಡಿಸಿಕೊಂಡು ಕೆಲಸದಿಂದ ವಜಾ ಮಾಡಿದ್ದಾರೆಂದು ರೈತರು ಆ ಕಂಪನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಭೂಮಿ ಕೊಟ್ಟ ನಮ್ಮನ್ನು ಕಂಗಾಲಾಗಿ ತಿರುಗಾಡುವಂತೆ ಮಾಡಿದ್ದಾರೆ. ಭೂಮಿ ಕಳೆದುಕೊಂಡ ನಮಗೆ ಈಗ ಬೇರೆ ಯಾವುದು ತೋಚದ ಈ ಅರ್ಜಿಯನ್ನು ಬಹಳ ಸಂಕಷ್ಟದಿಂದ ನಾವೆಲ್ಲರೂ ಒಗ್ಗೂಡಿ ಬರೆದು ಕೊಟ್ಟಿದ್ದೇವೆ. ಈ ಅರ್ಜಿಯನ್ನು ತಾವುಗಳು ಮನ್ನಿಸಿ ದಲಿತ ವ್ಯಕ್ತಿಗಳಾದ ನಮ್ಮವರಿಗೆ ನ್ಯಾಯ ದೊರಕಿಸಿ ಕೊಡಿ” ಎಂದು ವಾಲ್ಮೀಕಿ ಸಮಾಜದ ಮುಂಖಡರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
“ಆ ಕಾರ್ಖಾನೆಯವರು ಕೆಲಸ ಕೊಡಬೇಕು. ಇಲ್ಲವಾದರೆ ಆಗಷ್ಟ್ 7 ರಂದು(ಸೋಮವಾರ) ಕಾರ್ಖಾನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು. ಈ ಪ್ರತಿಭಟನೆಯಲ್ಲಿ ಕೊಪ್ಪಳ ಜಿಲ್ಲಾ ವಾಲ್ಮೀಕಿ ಸಮಾಜದ ಮುಂಖಡರು ಹಾಗೂ ಕೊಪ್ಪಳ ತಾಲೂಕಿನ ಎಲ್ಲಾ ಗ್ರಾಮದ ವಾಲ್ಮೀಕಿ ಸಮಾಜ ಭಾಂಧವರು ಸೇರಲಿದ್ದಾರೆ” ಎಂದು ತಿಳಿಸಿದರು.
ವರದಿ : ಕನಕಪ್ಪ ಕೊಪ್ಪಳ