ಕರ್ನಾಟಕ ರೈತ ಸುರಕ್ಷಾ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ನಿಗದಿಪಡಿಸಿದ ಬೆಳೆ ವಿಮಾ ನೋಂದಣಿ ಅವಧಿಯನ್ನು ಒಂದು ದಿನದ ಮಟ್ಟಿಗೆ ಅಂದರೆ, ಇಂದು (ಮಂಗಳವಾರ) ಮುಂದೂಡಲಾಗಿದೆ. ಈ ಹಿಂದೆ ನೋಂದಣಿಗೆ ಜುಲೈ 31ರ ಕೊನೆಯ ದಿನವಾಗಿತ್ತು. ಆದರೇ, ಈ ದಿನವನ್ನು ಆಗಸ್ಟ್.1ರ ಇಂದು ಕೊನೆಯ ದಿನ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೀಗಾಗಿ ರಾಜ್ಯದ ರೈತರು ತಪ್ಪದೇ ಬೆಳೆ ವಿಮಾ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಿ ಎಂದು ಸರ್ಕಾರ ಹೇಳಿದೆ.
2023-24ನೇ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು, ತೊಗಲಿ, ಉದ್ದು, ಸಜ್ಜೆ, ಜೋಳ, ಮುಸುಕಿನ ಜೋಳ, ಸೋಯಾ, ಅವರೇ, ಎಳ್ಳು, ಶೇಂಗಾ, ಹತ್ತಿ, ಟೊಮ್ಯಾಟೋ, ಅರಿಶಿಣ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಿಗದಿಪಡಿಸಿದ ಬೆಳೆ ವಿಮೆ ನೋಂದಣಿಗೆ ಇಂದಿನವರೆಗೆ ಅವಕಾಶ ನೀಡಲಾಗಿದದ್ದು, ಇಂದು ಬೆಳೆ ವಿಮಾ ಪರಿಹಾರಕ್ಕೆ ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ. ಒಂದು ವೇಳೆ ಪ್ರವಾಹ, ನೆರೆ, ಅತಿವೃಷ್ಠಿ ಸೇರಿದಂತೆ ವಿವಿಧ ಕಾರಣಗಳಿಂದ ನಿಮ್ಮ ಬೆಲೆ ನಷ್ಟವಾದಾಗ, ಈ ವಿಮಾ ಯೋಜನೆಯ ಅಡಿಯಲ್ಲಿ ಪರಿಹಾರ ದೊರೆಯಲಿದೆ ಎಂದು ಸ್ಪಷ್ಟನೆ ನೀಡಿದೆ.