MOST IMPORTANT : ಭಯಾನಕ ಕಣ್ಣು ಬೇನೆ ರೋಗದ ಹರಡುವಿಕೆಗೆ ಕಾರಣ : ನಿಯಂತ್ರಣಕ್ಕೆ ಏನು ಮಾಡಬೇಕು ಗೊತ್ತ?

You are currently viewing MOST IMPORTANT : ಭಯಾನಕ ಕಣ್ಣು ಬೇನೆ ರೋಗದ ಹರಡುವಿಕೆಗೆ ಕಾರಣ : ನಿಯಂತ್ರಣಕ್ಕೆ ಏನು ಮಾಡಬೇಕು ಗೊತ್ತ?

ರಾಜ್ಯದಾಧ್ಯಂತ ಇತ್ತೀಚೆಗೆ “ಮದ್ರಾಸ್ ಐ” (Madras Eye) ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಳಿಗಾಲಕ್ಕೂ ಮುನ್ನವೇ ‘ಮದ್ರಾಸ್ ಐ’ ತೀವ್ರ ಸ್ವರೂಪದಲ್ಲಿ
ರಾಜ್ಯ ವ್ಯಾಪಿ ಹರಡುತ್ತಿದೆ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಜೊತೆಗೆ ‘ಮದ್ರಾಸ್ ಐ’ ಪ್ರಕರಣಗಳು ಜನರನ್ನು ನಲುಗಿಸುತ್ತಿವೆ. ಇದೀಗ ರಾಜ್ಯದಲ್ಲಿ ‘ಮದ್ರಾಸ್ ಐ’ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಲ್ಲೂ ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವುದು ತೀವ್ರ ಆತಂಕಕ್ಕೆ ದೂಡಿದೆ.

ಕಳೆದ ವರ್ಷಕ್ಕೆ (2022-23) ಹೋಲಿಸಿದರೇ, ಈ ಬಾರಿ ಮದ್ರಾಸ್ ಐ ರೋಗವು ಅವಧಿಗೂ ಮುನ್ನವೇ ಕಾಣಿಸಿಕೊಂಡಿದ್ದು, ಕಣ್ಣಿನ ಆಸ್ಪತ್ರೆಗೆ ಬರುವ 10 ರೋಗಿಗಳಲ್ಲಿ ಐವರಿಗೆ ‘ಮದ್ರಾಸ್ ಐ’ ರೋಗಗಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

✪ ಮದ್ರಾಸ್ ಐ (Madras Eye) ಲಕ್ಷಣಗಳೇನು?

ಈ ರೋಗವು ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ, ಮಳೆಗಾಲದಲ್ಲೇ ಆರಂಭಗೊಂಡಿದೆ. ಈ ರೋಗದ ಲಕ್ಷಣಗಳು ಹೀಗಿದೆ.

➤ ವಿಪರೀತ ಕಣ್ಣು ಕೆಂಪಾಗುವುದು
➤ ದೃಷ್ಠಿ ಅಸ್ಪಷ್ಟವಾಗಿ ಕಾಣುವುದು
➤ ವಿಪರೀತ ಜ್ವರ ಹಾಗೂ ಮೈ ಕೈ ನೋವು

✪ ಮದ್ರಾಸ್ ಐ ಬರೋದಕ್ಕೆ ಕಾರಣವೇನು?

ಮದ್ರಾಸ್ ಐ ರಾಜ್ಯಾಧ್ಯಂತ ಹೆಚ್ಚಳವಾಗುತ್ತಿರುವದಕ್ಕೆ ಇಲ್ಲಿದೆ ಪ್ರಮುಖ ಕಾರಣಗಳು

✯ ಹವಾಮಾನ ವೈಪರೀತ್ಯ
✯ ನಿರಂತರ ಮಳೆಯ ಕಾರಣ
✯ ಸಾಮಾನ್ಯವಾಗಿ ಈ ಸೋಂಕು ಚಳಿಗಾಲದಲ್ಲಿ ಹೆಚ್ಚಾಗಿ ವರದಿಯಾಗುತ್ತಿತ್ತು.
✯ ಮಳೆಯಿಂದಾಗಿ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಹೆಚ್ಚಾಗುತ್ತಿದೆ.

✪ ಹಾಗಾದರೆ ಈ ರೋಗದ ನಿಯಂತ್ರಣಕ್ಕೆ ಏನು ಮಾಡಬೇಕು?

❂ ಮದ್ರಾಸ್ ಐ ನಿಂದ ಬಳಲುತ್ತಿರುವವರು ಮೊದಲು ಸ್ವಚ್ಛ ನೀರಿನಿಂದ ಆಗಾಗ್ಗೆ ಕಣ್ಣುಗಳನ್ನು ಶುಚಿಗೊಳಿಸಿಕೊಳ್ಳಬೇಕು.
❂ ಸೋಂಕು ಕಂಡು ಬಂದ ತಕ್ಷಣ ಕಣ್ಣಿನ ವೈದ್ಯರ ಬಳಿಗೆ ತೆರಳಿ, ತೋರಿಸಿಕೊಂಡು, ಚಿಕಿತ್ಸೆ ಪಡೆಯಬೇಕು.
❂ ಸೋಂಕಿತ ವ್ಯಕ್ತಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಈ ಮೂಲಕ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
❂ ವಸೋಂಕಿತ ವ್ಯಕ್ತಿ ಬಳಸಿದ ಬಟ್ಟೆ ಹಾಗೂ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕಾಗಿದೆ.

✪ ಏನು ಮಾಡಬಾರದು? ಎಂದರ ಬಗ್ಗೆ ಸಂಕ್ಷಿಪ್ತ ಮಾಹಿತಿ

✩ ಈ ರೋಗದಿಂದ ಬಳಲುತ್ತಿರುವವರು ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು.
✩ ಸ್ವಯಂ ಚಿಕಿತ್ಸೆ ವಿಧಾನಗಳನ್ನು ಅನುಸರಿಸಬಾರದು.
✩ ಸೋಂಕಿತರಿಂದ ಅಂತರವನ್ನು ಕಾಯ್ದುಕೊಳ್ಳಬೇಕು.
✩ ಹೆಚ್ಚು ಜನರು ಸೇರುವಂತ ಪ್ರದೇಶಗಳಲ್ಲಿ ಓಡಾಡಬಾರದು.
✩ ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಮುಟ್ಟಬಾರದು.

ವರದಿ : ಚಂದ್ರು ಆರ್‌ ಭಾನಾಪೂರ್‌
(ವಿವಿಧ ಮೂಳಗಳಿಂದ ವಿಷಯ ಸಂಗ್ರಹ)

Leave a Reply

error: Content is protected !!