BREAKING : ODI CRICKET : ವಿಂಡಿಸ್ ವಿರುದ್ದ ಭಾರತಕ್ಕೆ 200 ರನ್‌ಗಳ ಭರ್ಜರಿ ಗೆಲುವು, ಸರಣಿ ಜಯ..!!

You are currently viewing BREAKING : ODI CRICKET : ವಿಂಡಿಸ್ ವಿರುದ್ದ ಭಾರತಕ್ಕೆ 200 ರನ್‌ಗಳ ಭರ್ಜರಿ ಗೆಲುವು, ಸರಣಿ ಜಯ..!!

ವೆಸ್ಟ್ ಇಂಡೀಸ್ ನ ಟರೌಬಾದಲ್ಲಿ ನಡೆದ ಮೂರನೇ ಎಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ವಿಂಡೀಸ್ ವಿರುದ್ದ 200 ರನ್ನುಗಳ ಬ್ರಹತ್ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಎಕದಿನ ಪಂದ್ಯಗಳ ಸರಣಿಯನ್ನು ಭಾರತ 2-1 ರಿಂದ ಕೈವಶ ಮಾಡಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡವು ನಿಗದಿತ 50 ಓವರ್ ಗಳಲ್ಲಿ 351 ರನ್ ಗಳ ಬ್ರಹತ್ ಮೊತ್ತ ಸೇರಿಸಿತು. ಆರಂಭಿಕ ಬ್ಯಾಟ್ ಮನ್ ಸುಬ್ ಮನ್ ಗಿಲ್ 85, ಇಶಾನ್ ಕಿಶನ್ 77 ರನ್, ಆ ನಂತರದಲ್ಲಿ ಬಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಸ್ಪೋಟಕ 70 ರನ್ ಗಳೊಂದಿಗೆ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 351 ರನ್ ಗಳ ಬ್ರಹತ್ ಮೊತ್ತ ಪೇರಿಸಿತು.

ಬ್ರಹತ್ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡಿಸ್ ವೇಗಿಗಳಾದ ಮುಖೇಶ್ ಕುಮಾರ್, ಶಾರ್ದುಲ್ ಥಾಕೂರ್ ಮಾರಕ ದಾಳಿಗೆ ಸಿಲುಕಿ 35.3 ಓವರ್ ನಲ್ಲಿ 151 ರನ್ ಗಳಿಗೆ ಅಲೌಟ್ ಆಯಿತು. ಇದರೊಂದಿಗೆ 200 ರನ್ ಗಳ ಬ್ರಹತ್ ದಿಗ್ವಿಜಯದೊಂದಿಗೆ ಭಾರತ ತಂಡವು 2-1 ರಲ್ಲಿ ಸರಣಿಯನ್ನು ಜಯಿಸಿತು.

ಸಂಕ್ಷಿಪ್ತ ಸ್ಕೋರ್ :

ಭಾರತ 351 ರನ್ ( 50) ಓವರ್.

ಸುಬ್ಮನ್ ಗಿಲ್ 85, ಇಶಾನ್ ಕಿಶನ್ 77, ಹಾರ್ದಿಕ್ ಪಾಂಡ್ಯ 70.

ವೆಸ್ಟ್ ಇಂಡೀಸ್ 151 ರನ್ (35.3) ಓವರ್

ಗುಡಕೇಶ್ ಮೋತಿ 39, ಅಲಿಕ್ ಅಥನಜೆ 32 ರನ್,
ಶಾರ್ದುಲ್ 4/37, ಮುಖೇಶ್ 3/30

ಪಂದ್ಯ ಪುರುಷ : ಶುಭ್ ಮನ್ ಗಿಲ್ – 85 ರನ್,

ಸರಣಿ ಶ್ರೇಷ್ಠ :ಇಶಾನ್ ಕಿಶನ್.

5 ಪಂದ್ಯಗಳ ಟಿ ಟ್ವೆಂಟಿ ಸರಣಿ ನಾಳೆ ಆಗಸ್ಟ್ 3 ರಿಂದ ಪ್ರಾರಂಭ.

ಕ್ರೀಡಾ ವರದಿ : ಈರಯ್ಯ ಕುರ್ತಕೋಟಿ

Leave a Reply

error: Content is protected !!