BIG BREAKING : “ಲೀಡರ್‌ ರಾಮಯ್ಯ”, ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ..!

You are currently viewing BIG BREAKING : “ಲೀಡರ್‌ ರಾಮಯ್ಯ”, ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ..!

ಕರ್ನಾಟಕ ರಾಜ್ಯ ಕಂಡ ಅತ್ಯಂತ ಪ್ರಭಾವಿ ನಾಯಕ ಹಾಗೂ ಭಾಗ್ಯಗಳ ಸರದಾರ ರಾಜ್ಯದ ಯಶಸ್ವಿ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು ಎಂದು ಜನಜನಿತವಾಗಿದೆ. ಇದೀಗ ಸಿದ್ದರಾಮಯ್ಯನವರ ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಅವರು ಬದುಕಿನಲ್ಲಿ ನಡೆದು ಬಂದ ದಾರಿಯ ಕುರಿತು ಬಯೋಪಿಕ್ ಸಿನಿಮಾ ಒಂದು ತೆರೆಮರೆಯಲ್ಲಿ ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಸಿದ್ದರಾಮಯ್ಯನವರ ಬಯೋಪಿಕ್ ಸಿನಿಮಾದಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನು ತಮಿಳಿನ ಖ್ಯಾತ ನಟ, ವಿಜಯ್ ಸೇತುಪತಿ ಅವರು ನಟಿಸಲಿದ್ದಾರೆ ಎಂಬ ತಿಳಿದು ಬಂದಿದೆ. ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರ ಕುರಿತಂತೆ ಬಯೋಪಿಕ್ ಸಿನಿಮಾ ಆಗಿ ಬರಲಿದೆ ಎಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತ್ತು, ಈಗ ಮತ್ತೆ ಸಿದ್ದರಾಮಯ್ಯನವರ ಕುರಿತು ಸಿನಿಮಾ
ಸದ್ದು ಮಾಡುತ್ತಿದೆ. ಹಾಗಾಗಿ “ಲೀಡರ್‌ ರಾಮಯ್ಯ” ಎಂಬ ಸಿನಿಮಾ ತಯಾರಾಗುತ್ತಿದ್ದು, ಅವರ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ಅವರು ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಈ ಚಿತ್ರದಲ್ಲಿ ಸಿದ್ದರಾಮಯ್ಯನವರ ಪಾತ್ರ ನಿರ್ವವಹಿಸಲಿರುವ ವಿಜಯ ಸೇತುಪತಿಯವರು 40 ರಿಂದ 45 ನಿಮಿಷಗಳವರೆಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರ ತಂಡ ಸ್ಪಷ್ಟನೆ ನೀಡಿದ್ದು, ವಿಜಯ್ ಸೇತುಪತಿಯವರು ನಟಿಸಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಸಿದ್ದರಾಮಯ್ಯನವರ ಬಾಲ್ಯದ ಹೋರಾಟ ಹಾಗೂ ರಾಜಕೀಯ ಕುರಿತಂತೆ ಮೂರು ಭಾಗಗಳಾಗಿ ತೋರಿಸಲಾಗುತ್ತದೆ. ಅದರಲ್ಲೂ 2013 ರಿಂದ 2018 ರ ವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಒಂದು ಪಾತ್ರದಲ್ಲಿ ವಿಜಯ್ ಸೇತುಪತಿಯವರು ನಟಿಸಲಿದ್ದಾರೆ ಎಂದು ಮಾಹಿತಿ ಇದೆ. ಆದಷ್ಟು ಬೇಗ ಸಿದ್ದರಾಮಯ್ಯನವರನ್ನು ತೆರೆಯ ಮೇಲೆ ನೋಡಲು ಸಿದ್ದು ಅಭಿಮಾನಿಗಳು ಹಾಗೂ ರಾಜ್ಯ ಜನತೆ ಕಾತುರದಿಂದ ಕಾಯುತ್ತಿದ್ದು, ಶೀಘ್ರದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ವರದಿ : ಚಂದ್ರು ಆರ್‌ ಭಾನಾಪೂರ್‌
(ವಿವಿಧ ಮೂಳಗಳಿಂದ ವಿಷಯ ಸಂಗ್ರಹ)

Leave a Reply

error: Content is protected !!