GOOD NEWS : ಆಗಸ್ಟ್ 04ರಂದು ಕೊಪ್ಪಳದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರ

You are currently viewing GOOD NEWS : ಆಗಸ್ಟ್ 04ರಂದು ಕೊಪ್ಪಳದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರ

ಕೊಪ್ಪಳ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಭೂಮಿ ಐಎಎಸ್ & ಕೆಎಎಸ್ ಸ್ಟಡಿ ಸರ್ಕಲ್ ಕೊಪ್ಪಳ ಇವರ ಸಹಯೋಗದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರವನ್ನು ಆಗಸ್ಟ್ 04ರಂದು ಸಾಯಂಕಾಲ 4ಗಂಟೆಗೆ ನಗರದ ಸಾಹಿತ್ಯ ಭವನದ ಪಕ್ಕದಲ್ಲಿರುವ (ಅಶೋಕ ಸರ್ಕಲ್) ಲಯನ್ಸ್ ಆಸ್ಪತ್ರೆ ಕಾಂಪ್ಲೆಕ್ಸನ ಭೂಮಿ ಸ್ಟಡಿ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದು, ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.

ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಸ್.ಪ್ರಾಣೇಶ (ಕೆ.ಎ.ಎಸ್), ಮಂಗಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕರಾದ ಭೀಮಪ್ಪ ಎಚ್ ಗೊಲ್ಲರ, ಹೊಸಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ವೀರೇಶ ಬಿ ಅವರು ಪಾಲ್ಗೊಳ್ಳಲಿದ್ದಾರೆ. ಅರ್ಹ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಿ. 08539-220859, 9353515518ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!