ಕೊಪ್ಪಳ : 2023-24ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಆಯ್ಕೆಯಾದ ವಿದ್ಯಾರ್ಥಿಗಳು ಕೌನ್ಸಲಿಂಗ್‌ಗೆ ಹಾಜರಾಗುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
2023-24ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಈಗಾಗಲೇ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಸದರಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ 4ನೇ ಸುತ್ತಿನ ಕೌನ್ಸಲಿಂಗ್ ಮುಖಾಂತರ ಆಗಸ್ಟ್ 4ರಂದು ಸೀಟು ಹಂಚಿಕೆ ಮಾಡಲಾಗುವುದು.
*ಕೌನ್ಸಲಿಂಗ್ ಸ್ಥಳ;* ನಾಳೆ (ಆಗಷ್ಟ್.4) ಬೆಳಿಗ್ಗೆ 10.30 ರಿಂದ 2ರವರೆಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ `ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಆಜಾದ್ ಭವನ ಹೊಸಪೇಟ್ ರಸ್ತೆ ಕೊಪ್ಪಳ’ ಇಲ್ಲಿ ನಡೆಯಲಿದೆ.
ಮುಂದುವರದು ಕೌನ್ಸ್ಲಿಂಗ್‌ಗೆ ಅರ್ಹತೆ ಹೊಂದಿದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಕೊಪ್ಪಳ ಜಿಲ್ಲೆಯ ಎಲ್ಲಾ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ & ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಕೌನ್ಸಲಿಂಗ್‌ಗೆ ತಪ್ಪದೇ ಹಾಜರಾಗಬೇಕು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಸ್ಥಳದಲ್ಲಿಯೇ ಸಂಬಂಧಪಟ್ಟ ಶಾಲೆಗಳ ಪ್ರವೇಶ ದಾಖಲಾತಿ ಮಾಡಿಕೊಳ್ಳಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷಾ ಗುರುತಿನ ಚೀಟಿ(ಹಾಲ್‌ಟಿಕೇಟ್), ಮೂಲ ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ), ತಹಶೀಲ್ದಾರ್‌ರವರಿಂದ ಪಡೆದ ಮೂಲ ಜಾತಿ ಮತ್ತು ಮೂಲ ಆದಾಯ ಪ್ರಮಾಣ ಪತ್ರ (ಅಲ್ಪಸಂಖ್ಯಾತರ ಸಮುದಾಯ ರೂ.1.00 ಲಕ್ಷ, ಪ್ರ.ಗ-1 ರೂ.2.50 ಲಕ್ಷ, ಹಿಂದುಳಿದ ವರ್ಗ 2ಎ,2ಬಿ,3ಎ,3ಬಿ ರೂ.2.50 ಲಕ್ಷ ಎಸ್.ಸಿ ಎಸ್.ಟಿ ರೂ.2.50 ಲಕ್ಷ), ವಿಕಲಚೇತನ ವಿದ್ಯಾರ್ಥಿಗಳು ವೈದ್ಯಕೀಯ ಪ್ರಾಧಿಕಾರದಿಂದ ಪಡೆದಿರುವ ಶೇ.40ರಷ್ಟು ಕ್ಕಿಂತ ಕಡಿಮೆ ಇಲ್ಲದಂತೆ ಅಂಗವಿಕಲ ಪ್ರಮಾಣ ಪತ್ರ, ವಿಶೇಷ ಮಕ್ಕಳ ಪ್ರಮಾಣ ಪತ್ರ (ಮಾಜಿ ಸೈನಿಕರು, ಸಫಾಯಿ ಕರ್ಮಚಾರಿ, ದೇವದಾಸಿ, ಅನಾಥ, ರೈತರ ಆತ್ಮಹತ್ಯೆ ಇತರೆ), 5ನೇ ತರಗತಿಯ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ ಹಾಗೂ ಪಾಸ್‌ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರಗಳೊಂದಿಗೆ ಎಲ್ಲಾ ಮೂಲ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಕೌನ್ಸಲಿಂಗ್‌ಗೆ ಬರುವ ಸಮಯದಲ್ಲಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ: ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಟಣಕನಕಲ್, ತಳಕಲ್, ಕುಕನೂರು, ಕುದರಿಮೋತಿ, ಹಿರೇಬೆಣಕಲ್-1&2 ಮತ್ತು ತಾಲೂಕು ಮಾಹಿತಿ ಕೇಂದ್ರ ಕೊಪ್ಪಳ, ಕುಷ್ಟಗಿ ಗಂಗಾವತಿ & ಯಲಬುರ್ಗಾ ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ ಹೊಸಪೇಟೆ ರಸ್ತೆ ಕೊಪ್ಪಳ-583231 ದೂರವಾಣಿ ಸಂಖ್ಯೆ:-08539225070, ಈ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.