ಕುಕನೂರು : ‘ದೂರದೃಷ್ಟಿ, ಧೀಮಂತ ರಾಜಕಾರಣಿಗೆ ಮಸಿ ಬಳಿಯುವದಾಗಿ ಜೆಡಿಎಸ್ ನ ಮಲ್ಲನಗೌಡ ಕೋನನಗೌಡರ್ ಎಂಬುವವರು ಹೇಳಿರುವುದು ಖಂಡನೀಯ’ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿನ್ನಾಳ್ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಮಲ್ಲಿಕಾರ್ಜುನ ಬಿನ್ನಾಳ್ ಅವರು, ‘ರಾಯರಡ್ಡಿ ಅವರು ಈ ರಾಜ್ಯ ಕಂಡ ಅಭಿವೃದ್ಧಿಶೀಲ ಮತ್ತು ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ವರು,ಮಾಜಿ ಪ್ರಧಾನಿ ದೇವೇಗೌಡ ಅವರ ಸಂಪುಟದಲ್ಲಿ ಸಚಿವರಾಗಿದ್ದವರು, ಈಗಲೂ ಕೂಡಾ ದೇವೇಗೌಡರ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿದ್ದಾರೆ, ಮೊನ್ನೆಯ ತಳಕಲ್ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ರಾಯರಡ್ಡಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರೊಂದಿಗಿನ ಆತ್ಮೀಯತೆ ಬಣ್ಣನೆ ಮಾಡಿದ್ದಾರೆ, ಆತ್ಮೀಯತೆ ಅಪಾರ್ಥ ಮಾಡಿಕೊಂಡು ಮಲ್ಲನಗೌಡ ಅವರು ಮಸಿ ಬಳಿಯುವುದಾಗಿ ಹೇಳಿರುವುದು ಖಂಡನೀಯ ರಾಯರಡ್ಡಿ ಅವರ ಘನತೆ ಬಗ್ಗೆ ಮಲ್ಲನಗೌಡರಿಗೆ ಗೊತ್ತಿಲ್ಲ ಎಂದು ಡಾ.ಬಿನ್ನಾಳ ಹೇಳಿದ್ದಾರೆ.
ಅತ್ಯಂತ ಹಿಂದುಳಿದ ತಾಲೂಕಿಗೆ ರಸ್ತೆ, ರೈಲ್ವೆ, ನೀರು, ವಿದ್ಯುತ್ ಸಂಪರ್ಕ, ಶಾಲೆ, ಕಾಲೇಜು, ಹಾಸ್ಟೆಲ್ ಗಳು ಒಂದಲ್ಲ ಎರಡಲ್ಲ ನೂರಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಬಸವರಾಜ್ ರಾಯರಡ್ಡಿ ಅವರು.1985 ರಲ್ಲಿ ಶಾಸಕರಾಗುವುದಕ್ಕೂ ಮುಂಚೆ ಕಳ್ಳಿಸಾಲು, ಲೆಕ್ಕಿ ಸಾಲು, ಬಂಡಿ ರಸ್ತೆಗಳು ಇದ್ದವು, ಇಂದು ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ, ರೈಲ್ವೆ ಯೋಜನೆ ತಂದಿದ್ದಾರೆ ಇಷ್ಟೆಲ್ಲಾ ಮಾಡಿದ್ದು ಬಸವರಾಜ್ ರಾಯರಡ್ಡಿ ಅಂತಹ ಧೀಮಂತ ನಾಯಕರು.
ವಸತಿ ಸಚಿವರಾಗಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದಾರೆ, ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಧಾರವಾಡದಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಬಂದು ಉದ್ಘಾಟನೆ ಮಾಡುವಂತಹ ದೊಡ್ಡ ಐ ಐ ಟಿ ಯನ್ನು ಕಟ್ಟಿಸಿದರು, ಬೆಂಗಳೂರಲ್ಲಿ ಸ್ಕೂಲ್ ಆಪ್ ಎಕನಾಮಿಕ್ಸ್ ತಂದರು.ಇದೆಲ್ಲಾ ಮಾಡಿದ್ದು ರಾಯರಡ್ಡಿ ಅವರು.
ಯಾರೇ ಆಗಲಿ ಬಸವರಾಜ್ ರಾಯರಡ್ಡಿ ಅವರ ಬಗ್ಗೆ ಮಾತನಾಡುವಾಗ ಎಚ್ಚರವಿಟ್ಟು ಮಾತಾಡ್ಬೇಕು ಎಂದು ಡಾ ಮಲ್ಲಿಕಾರ್ಜುನ ಬಿನ್ನಾಳ ಹೇಳಿದರು.