ಕೊಪ್ಪಳ : ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ ಅವರು ಹಿರಿಯರು, ಅವರು ಹತಾಶೆರಾಗುವ ಪ್ರಶ್ನೆಯೇ ಇಲ್ಲಾ, ಅವರ ಮಾರ್ಗದರ್ಶನದಲ್ಲಿಯೇ ನಾವು ಕೆಲಸ ಮಾಡುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ತಂಗಡಗಿ ಅವರು, ಕಿರಿಯರೆಲ್ಲ ಮಂತ್ರಿಗಳಾಗಿದ್ದಾರೆ ಎಂಬ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ರಾಯರಡ್ಡಿ ಅವರು ಹಿರಿಯರು, ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ಅವರು ರಾಜಕಾರಣ ಮಾಡುತ್ತಿರುವಾಗ ನಾವು ಇನ್ನೂ ಕಾಲೇಜು ಓದುತ್ತಿದ್ದೆವು, ಅವರ ಸಲಹೆ ಮಾರ್ಗದರ್ಶನ ಪಡೆದುಕೊಂಡು ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಸಚಿವರಾದ ತಂಗಡಗಿ ಹೇಳಿದರು.
ಕೊಪ್ಪಳ ಲೋಕಸಭೆಗೆ ಯಾರು ಸ್ಪರ್ಧೆ ಮಾಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತೆ, ಅವರು ಸೂಚಿಸಿದ ಅಭ್ಯರ್ಥಿ ಪರ ಕೆಲಸ ಮಾಡಲು ಸಿದ್ದ,
ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಅವರು ಖರ್ಗೆ ಅವರ ಬಗ್ಗೆ ಆಡಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆರಗ ಜ್ಞಾನೇಂದ್ರ ಅವರ ಆ ಮಾತು ಇಡೀ ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಅವಮಾನ, ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ತಿರುಗೇಟು ಕೊಟ್ಟರು.