LOCAL EXPRESS : ಜಿಲ್ಲಾ ಉಸ್ತುವಾರಿ ಸಚಿವರಿಂದ ಮುಂದುವರೆದ ಪ್ರವಾಸ ಕಾರ್ಯಕ್ರಮ

You are currently viewing LOCAL EXPRESS : ಜಿಲ್ಲಾ ಉಸ್ತುವಾರಿ ಸಚಿವರಿಂದ ಮುಂದುವರೆದ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಆಗಸ್ಟ್ 05 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 06 ಮತ್ತು 07 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಸಚಿವರು ಆಗಸ್ಟ್ 06ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿಯ ಆರ್.ಜಿ ರಸ್ತೆಯಲ್ಲಿರುವ ಪದ್ಮಶ್ರೀ ಕನ್ವೆನ್ಸಸ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ(ರಿ) ಕಾರಟಗಿ ಇವರ ವತಿಯಿಂದ ಏರ್ಪಡಿಸಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬಳಿಕ 11ಕ್ಕೆ ಕಾರಟಗಿಯಿಂದ ನಿರ್ಗಮಿಸಿ ಕನಕಗಿರಿ, ಹುಲಿಹೈದರ, ತಾವರಗೇರ ಮಾರ್ಗವಾಗಿ ಕುಷ್ಟಗಿ ತಾಲೂಕಿಗೆ ಪ್ರಯಾಣ ಬೆಳೆಸುವರು.

ಮಧ್ಯಾಹ್ನ 12 ಗಂಟೆಗೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ಶ್ರೀ ಮಹರ್ಷಿ ವಾಲ್ಮೀಕಿ ಗುರುಕುಲಾಶ್ರಮದಲ್ಲಿ ವಾಲ್ಮೀಕಿ ಸ್ವಾಭಿಮಾನ ಸಂಘದವರು ಅಯೋಜಿಸಿರುವ ವಾಲ್ಮೀಕಿ ಸ್ವಾಭಿಮಾನಿ ಜನ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 03ಕ್ಕೆ ಹಿರೇಮನ್ನಾಪುರದಿಂದ ನಿರ್ಗಮಿಸಿ ತಾವರಗೇರಾ, ಹುಲಿಹೈದರ, ಕನಕಗಿರಿ ಮಾರ್ಗವಾಗಿ ಅಂದು ಸಂಜೆ 04ಕ್ಕೆ ಕಾರಟಗಿಗೆ ಆಗಮಿಸಿ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ನಡೆಸಿ ಕಾರಟಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಆಗಸ್ಟ್ 07 ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ ಬೆಳಿಗ್ಗೆ 10.30ಕ್ಕೆ ಕನಕಗಿರಿ ತಾಲೂಕಿಗೆ ಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ಕಲಕೇರಿ, 12 ಗಂಟೆಗೆ ಬೆನಕನಾಳ, ಮಧ್ಯಾಹ್ನ 1 ಗಂಟೆಗೆ ಸುಳೇಕಲ್, ಮಧ್ಯಾಹ್ನ 3 ಗಂಟೆಗೆ ತಿಪ್ಪನಾಳದಲ್ಲಿ ಹಾಗೂ ಸಂಜೆ 5.30 ರಿಂದ ಕಾರಟಗಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ನಡೆಸುವರು. ಬಳಿಕ ಕಾರಟಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳು, ಮುಂದುವರೆದ ಪರಿಷ್ಕೃತ ಪ್ರವಾಸ ಕಾರ್ಯಕ್ರಮದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!