ದೇಶವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 6ರ) ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಮ್ಮ ಕರ್ನಾಟಕದಲ್ಲಿ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಲಿದೆ.
ದೇಶದ ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮಹತ್ವದ ಯೋಜನೆಗೆ ಒತ್ತು ನೀಡಲಾಗುತ್ತಿದ್ದು, ಈ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ “ಅಮೃತ್ ಭಾರತ್ ಸ್ಟೇಷನ್ ಯೋಜನೆ”ಯನ್ನು ದೇಶಾದ್ಯಂತ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಗಿದೆ.
ಈ ಯೋಜನೆಯಲ್ಲಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಈ ಯೊಜನೆಗೆ ಒಳಪಡುವ ನಿಲ್ದಾಣಗಳ ಪುನರಾಭಿವೃದ್ಧಿಗೆ 24,470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಮಾಡಲಾಗುತ್ತಿದೆ. ನಗರದ ಎರಡೂ ಬದಿಗಳ ಸರಿಯಾದ ಏಕೀಕರಣದೊಂದಿಗೆ ಈ ನಿಲ್ದಾಣಗಳನ್ನು ‘ನಗರ ಕೇಂದ್ರಗಳಾಗಿ’ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಯೊಜನೆಗೆ ಒಳಪಡುವ ರಾಜ್ಯವಾರು ನಿಲ್ದಾಣಗಳ ಸಂಖ್ಯೆಯ ಅಂಕಿ ಅಂಶಗಳು ಹೀಗಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳ- 37, ಮಧ್ಯಪ್ರದೇಶ-34, ಅಸ್ಸಾಂ-32, ಒಡಿಶಾ- 25, ಪಂಜಾಬ್- 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್- 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ನಿಲ್ದಾಣಗಳು ಸೇರಿವೆ. ಹರಿಯಾಣ-15, ಕರ್ನಾಟಕದಲ್ಲಿ 13 ನಿಲ್ದಾಣಗಳು ಸೇರಿವೆ.
ರಾಜ್ಯದ 13 ರೈಲ್ವೆ ನಿಲ್ದಾಣಗಳ ಪಟ್ಟಿ ಹೀಗಿದೆ
1) ಬಳ್ಳಾರಿ ರೈಲ್ವೆ ನಿಲ್ದಾಣ :– 16.7 ಕೋಟಿ ರೂಪಾಯಿ ವೆಚ್ಚ
2) ಘಟಪ್ರಭಾ ರೈಲ್ವೆ ನಿಲ್ದಾಣ, ಬೆಳಗಾವಿ ಜಿಲ್ಲೆ: – 18.2 ಕೋಟಿ ರೂಪಾಯಿ ವೆಚ್ಚ
3) ಗೋಕಾಕ್ ರೋಡ್ ರೈಲ್ವೆ ನಿಲ್ದಾಣ, ಬೆಳಗಾವಿ :– 17 ಕೋಟಿ ರೂಪಾಯಿ ವೆಚ್ಚ
4) ಬೀದರ್ ರೈಲ್ವೆ ನಿಲ್ದಾಣ :– 24.4 ಕೋಟಿ ರೂಪಾಯಿ ವೆಚ್ಚ
5) ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ :– 18.5 ಕೋಟಿ ರೂಪಾಯಿ ವೆಚ್ಚ
6) ಹರಿಹರ್ ರೈಲ್ವೆ ನಿಲ್ದಾಣ, ದಾವಣಗೆರೆ :– 25.2 ಕೋಟಿ ರೂಪಾಯಿ ವೆಚ್ಚ
7) ಅಳ್ನಾವರ ರೈಲ್ವೆ ನಿಲ್ದಾಣ, ಧಾರವಾಡ :– 17.2 ಕೋಟಿ ರೂಪಾಯಿ ವೆಚ್ಚ
8) ಗದಗ ರೈಲ್ವೆ ನಿಲ್ದಾಣ :– 23.2 ಕೋಟಿ ರೂಪಾಯಿ ವೆಚ್ಚ
9) ಅರಸೀಕೆರೆ ರೈಲ್ವೆ ನಿಲ್ದಾಣ, ಹಾಸನ :– 34.1 ಕೋಟಿ ರೂಪಾಯಿ ವೆಚ್ಚ
10) ವಾಡಿ ರೈಲ್ವೆ ನಿಲ್ದಾಣ, ಕಲಬುರ್ಗಿ :– 32.7 ಕೋಟಿ ರೂಪಾಯಿ ವೆಚ್ಚ
11) ಕಲಬುರ್ಗಿ ಜಂಕ್ಷನ್ ಗುಲ್ಬರ್ಗ ರೈಲ್ವೆ ನಿಲ್ದಾಣ, ಕಲಬುರ್ಗಿ :– 29.1 ಕೋಟಿ ರೂಪಾಯಿ ವೆಚ್ಚ
12) ಶಹಾಬಾದ್ ರೈಲ್ವೆ ನಿಲ್ದಾಣ, ಕಲಬುರ್ಗಿ :– 26.1 ಕೋಟಿ ರೂಪಾಯಿ ವೆಚ್ಚ
13) ಕೊಪ್ಪಳ ರೈಲ್ವೆ ನಿಲ್ದಾಣ :– 21.1 ರೂಪಾಯಿ ಕೋಟಿ ವೆಚ್ಚ