ಬೆಂಗಳೂರು : ಮುಂದಿನ ಎರಡು ವರ್ಷ “PSI” “ಪಿಎಸ್‌ಐ” ನೇಮಕಾತಿ ಇಲ್ಲ ನಡೆಯುವುದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ಎರಡು ವರ್ಷ ಪಿಎಸ್ ಐಗಳ ನೇಮಕಾತಿ ಸಾಧ್ಯವಿಲ್ಲ ಸದ್ಯ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದ್ದು, ಅದು ಮುಗಿಯಬೇಕು. ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ ಅವರು ಅವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ಇರುವುದಕ್ಕೆ ಈ ಸಮಸ್ಯೆ ಉಂಟಾಗಿದೆ. ಇದೇ ವೇಳೆ ಅವರು ನಿಗದಿತ ವೇಳೆಯಲ್ಲಿ ಅರ್ಹರಿಗೆ ಬಡ್ತಿ ನೀಡಲು ಕಾನೂನಿನಲ್ಲಿ ಅವಕಾಶ ಇರುವ ಹಿನ್ನಲೆಯಲ್ಲಿ ಮುಂದಿನ ಕೆಲವೇ ದಿನಗಳ್ಲಿ ಅರ್ಹರೆಲ್ಲರಿಗೂ ಬಡ್ತಿ ನಿಡಲಾಗುವುದು ಎಂದು ಹೇಳಿದರು.
ಈ ಮಧ್ಯ ಭಾರೀ ಸದ್ದು ಮಾಡಿದ್ದ 545 ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸಬೇಕೋ ಅಥವಾ ಆರೋಪಿ ಕೈಬಿಟ್ಟು ಉಳಿದವರನ್ನು ಆಯ್ಕೆ ಮಾಡಬೇಕೋ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಮಾತುಗಳು ಕೇಳಿಬರುತ್ತಿವೆ.