ಕೊಪ್ಪಳ : ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಮೀನು ಕೃಷಿ ಕೊಳಗಳ ನಿರ್ಮಾಣ, ಮೀನು ಕೃಷಿಕೊಳದ ಹೂಡಿಕೆ ವೆಚ್ಚಕ್ಕೆ ಸಹಾಯ, ಸಿಹಿ ನೀರು ಬಯೋಪ್ಲಾಕ್ ಘಟಕ ಸ್ಥಾಪನೆಗೆ ಸಹಾಯಧನ, ಇನ್ಸುಲೇಟೆಡ್ (ಶಾಖನಿರೋಧಕ) ವಾಹನ ಖರೀದಿಗೆ ಸಹಾಯಧನ ಹಾಗೂ ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯಧನ ಘಟಕಗಳಿಗೆ ಪ್ರಾರಂಭಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.
ಆಸಕ್ತ ಅರ್ಹ ಫಲಾನುಭವಿಗಳು ಆಗಸ್ಟ್ 22 ರೊಳಗಾಗಿ ಆಯಾ ಸಂಬAಧಪಟ್ಟ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಾದ ಕೊಪ್ಪಳ ಮೊ.ಸಂ: 7349711866, ಗಂಗಾವತಿ ಮೊ.ಸಂ: 9632338221 ಹಾಗೂ ಕುಷ್ಟಗಿ ಮೊ.ಸಂ: 7019520084 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.