BIG NEWS : ವಿದ್ಯಾರ್ಥಿಗಳೇ ಗಮನಿಸಿ..!!: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!

You are currently viewing BIG NEWS : ವಿದ್ಯಾರ್ಥಿಗಳೇ ಗಮನಿಸಿ..!!: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!


ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ಬಳಿಕ 2ನೇ ಬಾರಿಗೆ ಪೂರಕ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ, ಕೆಲ ಕಾಲೇಜುಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಳಿಸಲಾಗಿದೆ. ರದ್ದುಗೊಳಿಸಲಾಗುತ್ತಿದೆ ಎನ್ನುವುದಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ವಿದ್ಯಾರ್ಥಿಗಳು ಕೂಡ ಹೀಗೆ ಪೂರಕ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂದು ಸುದ್ದಿಗಳು ಹರಡಿದ್ದವು. ಆದರೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಂಡಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಎರಡನೇಯ ಪೂರಕ ಪರೀಕ್ಷೆಯನ್ನು ರದ್ದುಗೊಂಡಿದೆ ಎಂಬುದಾಗಿ ಹೇಳಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಇದೇ ಮಾತನ್ನು ಆಡುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಇವೆಲ್ಲವು ಸುಳ್ಳು. ಸತ್ಯಕ್ಕೆ ದೂರವಾಗಿರೋದಾಗಿ ತಿಳಿಸಿದೆ.

ದ್ವಿತೀಯ ಪಿಯುಸಿ ಎರಡನೇಯ ಪೂರಕ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ದ್ವಿತೀಯ ಪಿಯುಸಿ ಎರಡನೇಯ ಪೂರಕ ಪರೀಕ್ಷೆ ಆಗಸ್ಟ್ 21 ಸೋಮವಾರದಂದಿ ಆರಂಭಗೊಂಡು, ಸೆಪ್ಟಂಬರ್‌ 02ರವರೆಗೆ ನಡೆಯಲಿದೆ. ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳುವಂತೆ ಮಾಹಿತಿ ನೀಡಿದ್ದಾರೆ.

ದ್ವಿತೀಯ ಪಿಯುಸಿ ಪೂರಕ ಎರಡನೇಯ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ.

ಆಗಸ್ಟ್ 21 ರಂದು ಸೋಮವಾರ- ಕನ್ನಡ ಹಾಗೂ ಅರೇಬಿಕ್
ಆಗಸ್ಟ್ 22 ರಂದು ಮಂಗಳವಾರ ಐಚ್ಛಿಕ ಕನ್ಬಡ, ರಾಸಾಯನ, ಮೂಲಗಣಿತ
ಆಗಸ್ಟ್ 23 ರಂದು ಬುಧವಾರ- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಆಗಸ್ಟ್ 24 ರಂದು ಗುರುವಾರ- ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯಾವಹಾರ ಅಧ್ಯಯನ
ಆಗಸ್ಟ್ 25 ರಂದು ಶರವಾರ- ಇತಿಹಾಸ, ಸಂಖ್ಯಾಶಾಸ್ತ್ರ
ಆಗಸ್ಟ್ 26 ರಂದು ಇಂಗ್ಲಿಷ್
ಆಗಸ್ಟ್ 28 ರಂದು ಭೂಗೋಳಶಾಸದರತ, ಮನಃ ಶಾಸ್ತ್ರ, ಭೌತಶಾಸ್ತ್ರ
ಆಗಸ್ಟ್ 29 ರಂದು ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ಶಾಸ್ತ್ರ
ಆಗಸ್ಟ್ 30 ರಂದು ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
ಸೆಪ್ಟಂಬರ್‌ 01 ರಂದು ಹಿಂದಿ
ಸೆಪ್ಟಂಬರ್‌ 02 ರಂದು ಅರ್ಥ ಶಾಸ್ತ್ರ, ಜೀವಶಾಸ್ತ್ರ

Leave a Reply

error: Content is protected !!