ಕುಕನೂರು : ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮಹೇಂದ್ರ ಸ್ಕಾರ್ಪಿಯೊ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮಸಬಹಂಚಿನಾಳ ಗ್ರಾಮದ ಚೆನ್ನಪ್ಪ (55) ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಕರೆದೋಯ್ಯಲಾಯಿತು. ಯಾವುದೇ ರೀತಿ ಪ್ರಾಣಹಾನಿ ಆಗಿರುವುದಿಲ್ಲ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ 367 ರ (ಭಾನಾಪುರ-ಗೆದ್ದಿನ ಕೆರೆ ಕ್ರಾಸ್ ) ಬೈಕ್ ಸವಾರ ಗಾವಾರಳನಿಂದ ಮಸಬಹಂಚಿನಾಳ ಗ್ರಾಮದ ಕಡೆಗೆ ರಸ್ತೆ ದಾಟುವವಾಗ ಮಹೇಂದ್ರ ಸ್ಕಾರ್ಪಿಯೊ ಕಾರು ಬೈಕ್ ಗೆ ಡಿಕ್ಕಿ ಒಡೆದಿದೆ. ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ರೋಡ್ ಬ್ರೇಕರ್ ಹಾಕಿಲ್ಲವೆಂದು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇಡೀ ಶಾಪ ಹಾಕಿದರು.