ಕುಕನೂರು : ನೂತನ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ರಚನೆ ಮಾಡಲಾಗಿದ್ದು ಅದರಲ್ಲಿ ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಾನ ಪಡೆದಿದ್ದಾರೆ.
ರಾಜ್ಯ ವಿಧಾನ ಮಂಡಲದ 2023-24 ನೇ ಸಾಲಿನ ನೂತನ ಸ್ಥಾಯಿ ಸಮಿತಿ ರಚನೆ ಮಾಡಲಾಗಿದ್ದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಸವರಾಜ್ ರಾಯರಡ್ಡಿ, ಮತ್ತು ಬೆಳಗಾವಿ ಶಾಸಕ ಲಕ್ಷ್ಮಣ್ ಸವದಿ ಸ್ಥಾನ ಪಡೆದಿದ್ದಾರೆ.
ಇಪ್ಪತ್ತು ಸದಸ್ಯರ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯಲ್ಲಿ 15 ಜನ ವಿಧಾನಸಭಾ ಸದಸ್ಯರು, 5 ಜನ ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 211(2) ಮೇರೆಗೆ ಸಮಿತಿ ರಚಿಸಿ ಆರ್ ಅಶೋಕ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮಾಡಿ ಸಭಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಸಮಿತಿಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಆರ್ ವಿ ದೇಶಪಾಂಡೆ, ಜಿ ಟಿ ದೇವೇಗೌಡ, ಸಿ ಸಿ ಪಾಟೀಲ್ ಸೇರಿದಂತೆ 15 ಜನ ಎಂ ಎಲ್ ಎ ಗಳು ಇದ್ದಾರೆ, ಜಗದೀಶ್ ಶೆಟ್ಟರ್, ಬಿ ಕೆ ಹರಿಪ್ರಸಾದ್ ಸೇರಿ ಐವರು ಎಂ ಎಲ್ ಸಿ ಗಳು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.