LOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ..!!

You are currently viewing LOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ  ಅವರಿಂದ  ಪ್ರಶಂಸನಾ ಪತ್ರ..!!

ಬಸವರಾಜ್ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ

ಕುಕನೂರು : ತಮ್ಮ ಶಾಸಕ ಸ್ಥಾನದ ಸಂಪೂರ್ಣ ಐದು ವರ್ಷ ಅವಧಿಯ ಮಾಸಿಕ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ನೀಡಿದಕ್ಕೆ ಪ್ರಶಂಸಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವರಾಜ್ ರಾಯರಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಹಿಂದಿನ ಅವಧಿಯಲ್ಲಿಯೂ ಶಾಸಕ ರಾಯರಡ್ಡಿ ಅವರು ತಮ್ಮ ವೇತನವನ್ನು ಸರ್ಕಾರಕ್ಕೆ ನೀಡಿ ಔದಾರ್ಯ ಮೆರೆದಿದ್ದರು. ಈಗ ಮತ್ತೆ ರಾಯರಡ್ಡಿ ಅವರು ತಮ್ಮ ಶಾಸಕ ಸ್ಥಾನದ ಅವಧಿಯ ಮಾಸಿಕ ವೇತನವನ್ನು ರಾಜ್ಯ ಸರ್ಕಾರದ ಮಹತ್ವಕಾಂಕ್ಷೀ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಬಳಸಿಕೊಳ್ಳಲಿ ಎಂದು ರಾಯರಡ್ಡಿ ಅವರು ತಮ್ಮ ವೇತನವನ್ನು ನೀಡಿರುತ್ತಾರೆ.

ಶಾಸಕರ ಈ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು ಇತರ ಶಾಸಕರಿಗೂ ರಾಯರಡ್ಡಿ ಅವರು ಮಾದರಿಯರಾಗಿದ್ದಾರೆ.

ವರದಿ – ಈರಯ್ಯ ಕುರ್ತಕೋಟಿ

Leave a Reply

error: Content is protected !!