ಇಂದಿನ ರಾಜಕೀಯ ವ್ಯವಸ್ಥೆ ನನಗೆ ಹಿಡಿಸುತ್ತಿಲ್ಲ. ಕೊಪ್ಪಳದಲ್ಲಿ ಬಸವರಾಜ್ ರಾಯರಡ್ಡಿ ವೈರಾಗ್ಯದ ಮಾತು.
ಕೊಪ್ಪಳ : ಪ್ರಸ್ತುತ ರಾಜಕೀಯ ವ್ಯವಸ್ಥೆ ತಮಗೆ ಬೇಸರ ತರಿಸಿದೆ, ಇನ್ನುಮುಂದೆ ನಾನು ಚುನಾವಣೆಗೆ ನಿಲ್ಲಬಾರದು ಅನಿಸುತ್ತಿದೆ, ಲೋಕಸಭೆಗೆ ನಿಲ್ಲುವ ಯೋಚನೆ ಇಲ್ಲವೇ ಇಲ್ಲ, ಲೋಕಸಭೆಗೆ ನಿಂತರೆ ಜನ ನನ್ನನ್ನು ಗೆಲ್ಲುಸುತ್ತಾರೆ ಎನ್ನಲಾಗದು, ಚುನಾವಣೆ ವ್ಯವಸ್ಥೆ ಸರಿಯಿಲ್ಲ, ನಮಂತವರನ್ನು ಲೋಕಸಭೆಗೆ ಜನ ಅರಿಸುತ್ತಾರೆ ಎಂದು ಹೇಳಲಿಕ್ಕಾಗದು ಎಂದು ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ ತಮ್ಮ ರಾಜಕೀಯ ನಿವೃತ್ತಿಯ ವೈರಾಗ್ಯದ ಮಾತುಗಳನ್ನು ಹೇಳಿದ್ದಾರೆ.
ಕೊಪ್ಪಳದಲ್ಲಿ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಸುದ್ದಿಗರರೊಂದಿಗೆ ಮಾತನಾಡಿದ ಶಾಸಕ ರಾಯರಡ್ಡಿ ಅವರು, ಪ್ರಸ್ತುತ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ, ಹಿಂದಿನ ಬಿಜೆಪಿ ಅವಧಿಯಲ್ಲಿಯು 40% ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು, ಈಗ ಗುತ್ತಿಗೆದಾರರು 15% ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಕರ್ನಾಟಕ ಭ್ರಷ್ಟ ರಾಜ್ಯವಾಗುತ್ತಿದೆ, ಇದರಿಂದ ಕೆಟ್ಟ ಹೆಸರು ಬರುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂದು ರಾಯರಡ್ಡಿ ಹೇಳಿದ್ದಾರೆ.
ಇಂದಿನ ಔತಣಕೂಟಕ್ಕೆ ರಾಜಕೀಯ ಮಹತ್ವವಿಲ್ಲ, ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರು, ಮುಖಂಡರು, ಅಧಿಕಾರಿಗಳಿಗೆ ಔತಣ ಕೂಟ ಮಾಡಿರುವೆ, ಈ ಹಿಂದೆಯೂ ನಾನು ಔತಣಕೂಟಕ್ಕೆ ಕರೆದಿದ್ದೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.