ಬೆಂಗಳೂರು : ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್’ ದಾಖಲು ಮಾಡಲಾಗಿದೆ. ನಿನ್ನೆಯಿಂದ ಉಪೇಂದ್ರ ಅವರು ಮಾತನಾಡಿರುವ ವಿಡಿಯೋವೊಂದರಲ್ಲಿ ‘ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ ಅಂತ’ ಹೇಳಿದ್ದರು. ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ವಿರುದ್ದ ಆಕ್ರೋಶವನ್ನ ವಿವಿಧ ವರ್ಗದ ಜನತೆ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್ ಎಂಬಾತ ಅವರ ವಿರುದ್ಧ ದೂರು ನೀಡಿದ್ದಾರೆ.
ನಟ ಉಪೇಂದ್ರ ಅವರ ವಿರುದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ‘ಅಟ್ರಾಸಿಟಿ ಕೇಸ್’ ಅವರ ವಿರುದ್ದ ಕಠಿಣ ಕ್ರವನ್ನು ಕೈಗೊಳ್ಳವುಂತೆ ಸೂಚನೆ ಮನವಿ ಮಾಡಿದ್ದಾರೆ. ಇದೇ ವೇಳೆ ತಮ್ಮ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ನಟ ಉಪೇಂದ್ರ ತಮ್ಮ ಮಾತಿನಿಂದ ಆಗಿರುವ ನೋವಿಗೆ ಕ್ಷಮೆ ಕೇಳಿದ್ದಾರೆ.