ಕುಕನೂರು : ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಲೋಗೋ ಅನ್ನು ಮಾನ್ಯ ಶಾಸಕರಾದ ಬಸವರಾಜ್ ರಾಯರಡ್ಡಿ ಅವರು ಇಂದು ಬಿಡುಗಡೆ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಸುದ್ದಿ ಡಿಜಿಟಲ್ ಮಾಧ್ಯಮದ ಲೋಗೋವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪ್ರಜಾವೀಕ್ಷಣೆ ಸಂಪಾದಕ ಚಂದ್ರು ಬಾಣಾಪುರ, ಸಹ ಸಂಪಾದಕರಾದ ಈರಯ್ಯ ಕುರ್ತಕೋಟಿ, ಶರಣಯ್ಯ ತೊಂಟದಾರ್ಯ, ಸುದ್ದಿ ಜಾಹಿರಾತು ಮುಖ್ಯಸ್ಥ ವಿಶ್ವನಾಥ್ ಪಟ್ಟಣಶೆಟ್ಟಿ, ಜಿಲ್ಲಾ ವರದಿಗಾರ ಕನಕಪ್ಪ ತಳವಾರ, ಪ್ರಜಾವಾಣಿ ವರದಿಗಾರ ಮಂಜುನಾಥ್ ಅಂಗಡಿ, ಇತರರು ಉಪಸ್ಥಿತರಿದ್ದರು.