ಕುಕನೂರು : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮ ನಿನ್ನೆ (ಮಂಗಳವಾರ) ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾ ವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು.
ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಹಾಗೂ ಗಣಿ ಉದ್ಯಮಿ ಅನೀಲ್ ಆಚಾರ್ ಅವರು, ‘”ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮವು ಜನರ ಆಶಾಯಕ್ಕೆ ತಕ್ಕಂತೆ ಸುದ್ದಿಗಳನ್ನು ನೀಡಲಿ ಹಾಗೆ ಮಾಧ್ಯಮ ಲೋಕದಲ್ಲಿ ಉತ್ತುಂಗ ಸ್ಥಾನಕ್ಕೆ ಏರಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಸಿದ್ದಯ್ಯ ಉಳಾಗಡ್ಡಿ, ಗೋರ್ ಸೇನಾ ರಾಜ್ಯ ಪ್ರಧಾನಕಾರ್ಯದರ್ಶಿ ಸುರೇಶ್ ಬಳೂಟಗಿ, ಪ್ರಜಾವಾಣಿ ವರದಿಗಾರ ಮಂಜುನಾಥ್ ಅಂಗಡಿ, ಬಿಜೆಪಿ ಮುಖಂಡ ಕುಮಾರ್ ಬಳಗೇರಿ ಮತ್ತಿತರರು ಇದ್ದರು.