ಸೆ. 10 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ 5ನೇಯ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ

You are currently viewing ಸೆ. 10 ರಂದು   ಮೈಸೂರಿನಲ್ಲಿ  ರಾಜ್ಯ ಮಟ್ಟದ 5ನೇಯ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ

ಕುಕನೂರು : ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ) ಕುಕನೂರು ಕೊಪ್ಪಳ ಜಿಲ್ಲೆ ಹಾಗೂ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು ಸಹಯೋಗದಲ್ಲಿ “ವಿಜಯ ನಗರದಿಂದ ಮೈಸೂರು ಕಡೆ ಒಂದು ಸಾಂಸ್ಕೃತಿಕ ಪಯಣ” ಮಾಲಿಕೆ ಯಡಿಯಲ್ಲಿ *ಅಖಿಲ ಕನಾ೯ಟಕ ಸಾಹಿತ್ಯೋತ್ಸವ ಹಾಗೂ 5ನೇಯ ಸಾಂಸ್ಕೃತಿಕ ಸಮ್ಮೇಳನ ಸೆಪ್ಟೆಂಬರ್ 10 ರಂದು ವಿಶ್ವ ವಿಖ್ಯಾತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಂಚಾಲಕರಾದ ರುದ್ರಪ್ಪ ಭಂಡಾರಿ ಹಾಗೂ ಕೆ. ಬಿ. ರೂಪದಶಿ೯ನಿ ತಿಳಿಸಿದ್ದಾರೆ.

ಸೆಪ್ಟೆಂಬರ್ 10 ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ನಡೆಯುವ ಪೂಣ೯ ದಿನ ಕಾಯ೯ಕ್ರಮದಲ್ಲಿ ನಾಡಿನ ಪ್ರತಿಭಾವಂತ ಕಲಾವಿದರಿಂದ ಭಜನಾ, ಜಾನಪದ ಗಾಯನ, ಚಲನ ಚಿತ್ರ ಗಾಯನ, ಭಾವಗೀತೆ, ತತ್ವ ಪದ, ವಚನ ಗಾಯನ, ಚಲನಚಿತ್ರ ನೃತ್ಯ, ಬುಡಕಟ್ಟು ನೃತ್ಯ, ಹಾಸ್ಯ, ಏಕಪಾತ್ರಾಭಿನಯ, ವೇಷ ಭೂಷಣಗಳು, ಸಾಂಸ್ಕೃತಿಕ ಪ್ರತಿಭಾ ಪ್ರದಶ೯ನ, ಸಾಹಿತ್ಯೋತ್ಸವ ಕವಿ ಮೇಳ ಹಾಗೂ ಸಂಸ್ಥೆಯ ಮುಖವಾಣಿ ಅಪ್ಪಳಿಸು ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ, ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ. ಸಮಾರಂಭ ನಡೆಯಲಿದೆ. ಬೀದರ ನ ಖ್ಯಾತ ಭರತ ನಾಟ್ಯ ಕಲಾವಿದೆ ಸವಿತಾ ಘೋಪ೯ಡ ಅವರಿಂದ ಭಾರತ ನಾಟ್ಯ ಹಾಗೂ ಕುಕನೂರಿನ ಸಂಗೀತ ಕಲಾವಿದ ಮುರಾರಿ ಎಸ್.ಭಜಂತ್ರಿ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಕಾಯ೯ಕ್ರಮವು ಮೈಸೂರಿನ ಕುತ್ತೆತ್ತೂರು ಸಿತಾರಾಮರಾವ್ ಭವನ (ಹೋಟೆಲ್ ಮಾಲೀಕರ ಸಂಘ ) ಬಲ್ಲಾಳ್ ಸಕ೯ಲ್ ಸಮೀಪ ೧೨೬೫,೨ ನೆಯ ತಿರುವು ೧ ನೆಯ ಮುಖ್ಯ ರಸ್ತೆ ಕೃಷ್ಣ ಮೂತಿ೯ ಪುರಂ, ಮೈಸೂರು ೦೪. ನಡೆಯಲಿದ್ದು, ಆಸಕ್ತರು ರುದ್ರಪ್ಪ ಭಂಡಾರಿ ಅಧ್ಯಕ್ಷರು ಮೋ: ೭೮೧೫೯೮೫೫೦೫ ಸಂಪಕಿ೯ಸಬಹುದು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!