ಒಂದು ಚಿತ್ರ ಸಾವಿರ ಪದಗಳಿಗೆ ಸಮ : ಡಾ. ಮಹಾದೇವ ಮಹಾಸ್ವಾಮಿಗಳು

You are currently viewing ಒಂದು ಚಿತ್ರ ಸಾವಿರ ಪದಗಳಿಗೆ ಸಮ : ಡಾ. ಮಹಾದೇವ ಮಹಾಸ್ವಾಮಿಗಳು

ಕುಕನೂರು : ಒಂದು ಚಿತ್ರ ಸಾವಿರ ಪದಗಳಿಗೆ ಸಮ ಪದಗಳಲ್ಲಿ ವರ್ಣಿಸಲಾಗದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರದ ಮೂಲಕ ಛಾಯಾಗ್ರಾಹಕರು ತಿಳಿಸಿಬಲ್ಲರು ಎಂದು ಡಾ. ಮಹಾದೇವಮಹಾಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲೂಕ ಛಾಯಾಗ್ರಾಹಕರಿಂದ ಅನ್ನದಾನೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ೧೮೪ನೇ ವಿಶ್ವಛಾಯಾಗ್ರಾಹಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರ ಛಾಯಾಗ್ರಾಹಕರು ಪದಗಳಗಳ್ಳಿ ಹೇಳಲಾಗದ ಅದಷ್ಟೋ ಚಿತ್ರಗಳನ್ನು ಸೆರೆ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸದವರ ಖುಷಿಯನ್ನು ಹೆಚ್ಚಿಸಿ ಅವರ ಖುಷಿಯಲ್ಲಿಯೇ ತಮ್ಮ ನೋವನ್ನು ಮರೆತು ಮದುವೆ, ಮುಂಜಿಯAತಹ ಕಾರ್ಯಕ್ರಮದಲ್ಲಿ ಊಟ ನೀರನ್ನು ಮರೆತು ಛಾಯಾಗ್ರಹಣ ಮಾಡುತ್ತಾರೆ. ಇಂತಹ ಛಾಯಾಗ್ರಾಹಕ ದಿನಾಚರಣೆಯನ್ನು ಇಂದು ಪಟ್ಟಣದಲ್ಲಿ ಆಚರಿಸುತ್ತಿರುವುದು ಅಂತ್ಯAತ ಸಂತೋಷವನ್ನು ಉಂಟು ಮಾಡಿದೆ ಎಂದರು.

ಪಟ್ಟಣ ಪಂಚಾಯತ ಸದಸ್ಯ ಗಗನ್ ನೋಟಗಾರ ಮಾತನಾಡಿ, “ಛಾಯಾಗ್ರಾಹಕರು ಇಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಇಂದು ಪೋಟೋ ಗ್ರಾಫೀ ಬೆಳದಿದ್ದು ಪಟ್ಟಣ ಛಾಯಾಗ್ರಾಹಕರು ಸಹಿತ ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಉತ್ತಮ ಸೇವೆಯನ್ನು ನೀಡಿಲಿ” ಎಂದರು.

ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ತಾಲೂಕಿನ ಎಲ್ಲಾ ಛಾಯಾಗ್ರಾಹಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿಯನ್ನು ನೆಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಹನಮಂತಪ್ಪ ಹಂಪನಾಳ, ಪ್ರಶಾಂತ ಆರಬೇರಳಿನ, ಶರಣಪ್ಪಗೌಡ ಪಾಟೀಲ, ಮಹಮ್ಮದರಫೀ ಹಿರೇಹಾಳ, ಮುರ್ತುಜಾ ರಾಜೂರು, ಹುಸೇಸಾಬ ರಾಜೂರು, ಮುಂಜುನಾಥ ಹಿರೇಮಠ, ಚಂದ್ರ ಬಂಗಿ, ಈರಪ್ಪ ಬಂಗಿ, ಮಹದೇವಪ್ಪ ಆರೇರ, ಅಬ್ದುಲ್‌ರಫೀ ಕರಮುಡಿ, ಜಾಕೀರ್ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಪೋಟೋಗ್ರಾಫರ್‌ಗಳು ಹಾಗೂ ಇತರರಿದ್ದರು.

ವರದಿ : ಶರಣಯ್ಯ ತೋಂಟದಾರ್ಯಮಠ, ಕುಕನೂರು

Leave a Reply

error: Content is protected !!