ಕುಕನೂರು : ಕುಕನೂರು ತಾಲೂಕು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಯಥೇಚ್ಛವಾಗಿ ಇಸ್ಪೀಟ್ ಹಾಗೂ ಮಟ್ಕಾ ಹಾವಳಿ ಜೋರಾಗಿದ್ದು, ಕುಕನೂರು ಪೊಲೀಸ್ ಠಾಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಂತಹ ಟಿ.ಗುರುರಾಜ್ ಅವರು ಅಕ್ರಮ ದಂಧೆ ಹಾಗೂ ಜೂಜಾಟ, ಇಸ್ಪೀಟ್, ಮಟ್ಕಾ ಆಡುವವರಿಗೆ ಭರ್ಜರಿ ಶಾಕ್ ನೀಡಿದ್ದಾರೆ.
ನಿನ್ನೆ (ಆಗಸ್ಟ್ 18) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕುಕನೂರು ತಾಲೂಕಿನ ನಿಟ್ಟಾಲಿ ಗ್ರಾಮದ ಕೆರೆಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿರುವವರ ಮೇಲೆ ಪಿಎಸ್ಐ ಟಿ.ಗುರುರಾಜ್ ನೇತೃತ್ವದ ತಂಡ ದಾಳಿ ಮಾಡಿದೆ. ಈ ತಂಡವು ಬರೋಬ್ಬರಿ 22.03 ಸಾವಿರ ರೂಪಾಯಿ ನಗದು ಹಣ ಜಪ್ತಿ, 12 ಬೈಕ್ ವಶ ಹಾಗೂ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಟಿ. ಗುರುರಾಜ್ ನೇತೃತ್ವದ ತಂಡಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.