BIG NEWS : ಸೆ. 9 ರಂದು “ರಾಷ್ಟ್ರೀಯ ಲೋಕ್ ಅದಾಲತ್” : “ಸ್ಥಳದಲ್ಲೇ ನಿಮ್ಮ ಕೋರ್ಟ್ ಕೇಸ್ ಪರಿಹಾರ”..!

You are currently viewing BIG NEWS : ಸೆ. 9 ರಂದು “ರಾಷ್ಟ್ರೀಯ ಲೋಕ್ ಅದಾಲತ್” : “ಸ್ಥಳದಲ್ಲೇ ನಿಮ್ಮ ಕೋರ್ಟ್ ಕೇಸ್ ಪರಿಹಾರ”..!

ಕೋರ್ಟ್ ಕೇಸ್ ಸಂಬಂಧ ವರ್ಷಾನುಗಟ್ಟಲೇ ನೀವು ನ್ಯಾಯಾಲಯಕ್ಕೆ ಅಲೆದು, ಅಲೆದು ಸುಸ್ತಾಗಿದ್ದರೇ, ನೀವು ನ್ಯಾಯಾಲಯದಿಂದ ತೀರ್ಪು ನಿರೀಕ್ಷಿಸಿದ್ದರೇ, ನಿಮಗೆ ಗುಡ್ ನ್ಯೂಸ್ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ 9ರಂದು ರಾಜ್ಯಾಧ್ಯಂತ “ರಾಷ್ಟ್ರೀಯ ಲೋಕ್ ಅದಾಲತ್” ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿವಹಿಸಿದರೆ, ನಿಮ್ಮ ಕೋರ್ಟ್ ಕೇಸ್ ಬಗ್ಗೆ ಸ್ಥಳದಲ್ಲೇ ತೀರ್ಪು ಲಭ್ಯವಾಗಲಿದೆ. ಬಾಕಿ ಉಳಿದಿರುವ, ರಾಜಿ ಆಗಬಹುದಾದಂತ ಕ್ರಿಮಿನಲ್ ಕೇಸ್ ಗಳು, ಚೆಕ್ ಬೌನ್ಸ್ ಕೇಸ್ ಗಳು ಸೇರಿದಂತೆ ಇತರೆ ಪ್ರಕರಣಗಳಲ್ಲಿ ರಾಜೀಯಾಗಿರುವದನ್ನು ಪರಿಗಣಿಸಿ, ಬೇಕ ಕೇಸ್ ಗಳನ್ನು ಮುಕ್ತಾಯ ಮಾಡುವ ಸಂಬಂಧ ಮುಂಬರುವ ಸೆಪ್ಟೆಂಬರ್ 9 ರಂದು ರಾಜ್ಯದಲ್ಲಿ “ರಾಷ್ಟ್ರೀಯ ಲೋಕ್ ಅದಾಲತ್” ನಡೆಯಲಿದೆ.

ಈ ಅದಾಲತ್ ದಿನದಂದು ನೀವು ಭಾಗವಹಿಸಿದರೇ, ನಿಮ್ಮ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು. ಅದು ಬ್ಯಾಂಕ್ ವಸೂಲಿ ಕೇಸ್, ಕರೆಂಟ್ ಬಿಲ್, ನೀರಿನ ಬಿಲ್, ಕ್ರಿಮಿನಲ್ ಕೇಸ್, ದಾಂಪತ್ಯ ಕುರಿತ ಕೇಸ್, ರಿಯಲ್ ಎಸ್ಟೇಟ್ ಕೇಸ್, ಜಿಲ್ಲಾ ಗ್ರಾಹಕರ ವೇದಿಕೆಯ ಪ್ರಕರಣಗಳು, ಅಪಘಾತ ಪ್ರಕರಣಗಳು, ಕಾರ್ಮಿಕರ ವಿವಾದ, ಭೂ ವಿವಾದದಂತ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕಳೆದ ಬಾರಿ ನಡೆದಂತ ಲೋಕ್ ಅದಾಲತ್ ನಲ್ಲಿ ಸುಮಾರು 31,009 ಪ್ರಕರಣಗಳನ್ನು ರಾಜೀ ಮೂಲಕ, ಮುಕ್ತಾಯ ಆಗದೇ ಉಳಿದ್ದಂತ 3,879 ಕೇಸ್‌ಗಳನ್ನು ಪರಿಹಾರ ಮಾಡಲಾಗಿದೆ.

Leave a Reply

error: Content is protected !!