ಮುನಿರಾಬಾದ್ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಕ್ತದಾನಿಗಳ ಬಳಗ, ಗುಲಾಬ ಹುಸೇನ್ ಫೌಂಡೇಷನ್, ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಲಿಂಗರಾಜ, ‘ರೋಗಿಗಳಿಗೆ, ಅಪಘಾತ ಹೊಂದಿರುವವರಿಗೆ ಅವಶ್ಯವಿರುವ ರಕ್ತವನ್ನು ನೀಡುವ ಮೂಲಕ ಎಲ್ಲರೂ ಮಾನವೀಯತೆ ಮೆರೆಯಬೇಕು ಎಂದರು.
ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು, . ಡಾ” ಕೆ ಎಚ್ ತೊಗರಿ, ಡಾ” ವೆಂಕಟೇಶ್, ಡಾ”ಕನಕಪ್ಪ, ಡಾ” ಪ್ರಕಾಶ್ರ, ರಕ್ತದಾನವನ್ನು ಮಾಡುವ ಮುಖಾಂತರ ರಕ್ತಧಾನಿಗಳಾದರು, ಹಾಗೂ ಇಲ್ಲಿಯ ರಕ್ತದಾನ ಶಿಬಿರದಲ್ಲಿ ಒಂದು ವಿಶೇಷತೆಯನ್ನು ಎಲ್ಲರೂ ನೋಡಲು ಉತ್ಸಾಹದಿಂದ ಇದ್ದರು ಅದು ಏನಂದರೆ, ಮಾಜಿ ಸೈನಿಕರಿಗೆ ಕರೆಸಿ ಈ ಒಂದು ಶಿಬಿರದಲ್ಲಿ ಅವರಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ಮಾನ ಮಾಡಲಾಯಿತು. ಮಾಜಿ ಸೈನಿಕರಾದ ಸಂಜಿವ್ ತೋಟಗಂಟಿ, ಬಸಯ್ಯ ಹಿರೆಮಠ ಅವರಿಗೆ ಸನ್ಮಾನಿಸಲಾಯಿತು.
ವಿಶೇಷವಾಗಿ ಮುನಿರಾಬಾದ್ ಪೋಲಿಸ್ ಠಾಣೆ ಪಿಎಸ್‌ಐ ಅಮರೇಗೌಡ ರಕ್ತದಾನ ಮಾಡುವ ಮೂಲಕ ಯುವಕರಿಗೆ ಸ್ಪೂರ್ತಿಯಾದರು. ಈ ರಕ್ತದಾನ ಶಿಬಿರದಲ್ಲಿ ಸುಮಾರು 105 ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಕೆ. ಎಚ್.ತೊಗರಿ, ಮಾಜಿತಾಲೂಕು ಪಂಚಾತ್ ಅಧ್ಯಕ್ಷರು ಬಾಲಚಂದ್ರ, ಕರ್ನಾಟಕ ರಕ್ತದಾನಿಗಳ ಬಳಗ ಸಂಸ್ಥಾಪಕ ಅಧ್ಯಕ್ಷರು ಅಬ್ದುಲ್ ವಹೀದ್, ಉತ್ತರ ಕರ್ನಾಟಕ ಕಾರ್ಮಿಕ ವಿಭಾಗದ ಅಧ್ಯಕ್ಷರು ದಿನಾಕರ್, ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ದೇವೇಂದ್ರಪ್ಪ ಹಾಗೂ ಸಿಬ್ಬಂದಿಗಳು, ಮುನಿರಾಬಾದ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿಗಳು ಅನೇಕರು ಉಪಸ್ಥಿತರಿದ್ದರು.
ವರದಿ: ಕನಕಪ್ಪ ಕೆ. ತಳವಾರ, ಕೊಪ್ಪಳ