ಕೊಪ್ಪಳ : ನಿತ್ಯ ಸ್ವಚ್ಛತೆಯಿಂದ ಇರಬೇಕಿದ್ದ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣ ಇದೀಗ ಕಸದ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ, ಶೌಚಾಲಯಗಳ ಗಬ್ಬು ವಾಸನೆ ಹಾಗೂ ಶೌಚಾಲಯದ ಪಕ್ಕದಲ್ಲಿರುವ ನಲ್ಲಿಗಳಲ್ಲಿ ಅಸಮರ್ಪಕ ನಿರ್ವಹಣೆ ಸರ್ವೆ-ಸಾಮಾನ್ಯ ಎನ್ನುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತ್ಯಾಜ್ಯ ಎಸೆಯಲು ಪ್ರತ್ಯೇಕ ವ್ಯವಸ್ಥೆಯಿಲ್ಲ. ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕೂಡಲು ಸರಿಯಾದ ಆಸನಗಳಿಲ್ಲ. ಗಂಟೆಗಟ್ಟಲೆ ನಿಂತುಕೊಂಡು ಶೌಚಾಲಯದ ಗಬ್ಬು ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಪ್ರಯಾಣಿಕರಿಗೆ ಒದಗಿ ಬಂದಿದೆ.
“ಶಕ್ತಿ ಯೋಜನೆ” ಎಫಕ್ಟ್ …!
ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದ್ದರೂ, ಇದರಿಂದ ಸರ್ಕಾರದ ಹಣಕಾಸು ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದೆ. ದಿನ ನಿತ್ಯ ಹೆಚ್ಚು ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಣಿಸುತ್ತಿರುವುದರಿಂದ ಪ್ರತಿ ದಿನ ವಿವಿಧ ಆಫೀಸ್‌ಗಳಿಗೆ ಕಾರ್ಯಕ್ಕೆ ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುವುದಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಒಂದು ಶೇಕಡಾ 50ರಷ್ಟು ಸಿಟ್‌ಗಳು ಪರುಷರಿಗೆ ಮೀಸಲಿದ್ದರು ಅದರಲ್ಲಿ ಮಹಿಳೆಯರು ಆಕ್ರಮಿಸಿ ಕುಳಿತುಕೊಳ್ಳುತ್ತಾರೆ. ಹೀಗಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ. ಜಿಲ್ಲಾ ಕೇಂದ್ರದಿಂದ ಬೇರೆ ಬೇರೆ ಊರುಗಳಿಗೆ ತೆರೆಳುವ ಬಸ್‌ಗಳ ಕೊರೆತ ಉಂಟಾಗಿದ್ದು, ಇದರಿಂದಾಗಿಯೂ ತೊಂದರೆ ಉಂಟಾಗಿವೆ.
ಭದ್ರತೆ ಇಲ್ಲ, ಕಿಡಿಗೇಡಿಗಳ ಕಾಟ
ಕಾಲೇಜು ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿ ಬಸ್ ನಿಲ್ದಾಣಗಳಲ್ಲಿ ಉದ್ದಟತನ ಮೆರೆಯುತ್ತಾರೆ. ಸಂಜೆಯಾಗುತ್ತಿದ್ದಂತೆ ಕಿಡಿಗೇಡಿಗಳ ದಂಡೇ ಇಲ್ಲಿ ನೆರೆದಿರುತ್ತದೆ. ಬೀಟ್ ವ್ಯವಸ್ಥೆ ಇದ್ದರೂ ಪೊಲೀಸರು ಮಾತ್ರ ಇತ್ತ ಇಣುಕಿ ಸಹ ನೋಡುವುದಿಲ್ಲ ಎಂಬ ಆರೋಪಗಳು ಸರ್ವೆ-ಸಾಮಾನ್ಯವಾಗಿದೆ ಎಂದು ತಿಳಿದು ಬಂದಿದೆ.
ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ಖಾಲಿ ವ್ಯಾಟರ್ ಬಾಟಲಿಗಳು, ಒಡೆದ ಗಾಜಿನ ಚೂರು, ಇತರೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು ಬಸ್ ನಿಲ್ದಾಣದಲ್ಲಿ ದ್ವಿಚಕ್ರವಾಹನಗಳನ್ನು ನಿಲ್ಲಿಸುವುದಕ್ಕೆ ಯಾರು ಹೇಲೋರು ಕೇಳೊರು ಇಲ್ಲದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಸಾರಿಗೆ ಸಂಸ್ಥೆಯವರು ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
“ಜಿಲ್ಲಾ ಕೇಂದ್ರದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡಲಾಗಿದೆ. ವಾಹನಗಳ ನಿಲುಗಡೆಗೆ ನಿರ್ದಿಷ್ಟ ಜಾಗ ನಿಗದಿ ಮಾಡಿದ್ದರೂ ಸಾರ್ವಜನಿಕರು ಅದನ್ನು ಬಿಟ್ಟು ಬೇರೆ ಕಡೆಯೂ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಲಾಗುತ್ತಿದೆ. ತಿಂಡಿ, ತಿನಿಸುಗಳನ್ನು ತಿಂದು ಪ್ಯಾಸ್ಟಿಕ್ ತ್ಯಾಜ್ಯವನ್ನು ನಿಲ್ದಾಣದಲ್ಲಿಯೇ ಬೀಸಾಡಲಾಗುತ್ತಿದೆ. ಸಾರ್ವಜನಿಕರು ಹಣ ಪಾವತಿಸಿ ಶೌಚಾಲಯ ಬಳಕೆ ಮಾಡಿದರೂ ಅವುಗಳ ಸ್ವಚ್ಛತೆಯೇ ಇರುವುದಿಲ್ಲ”
:- ರಾಧಿಕಾ ಕರ್ಕಿಹಳ್ಳಿ
ಮಹಿಳಾ ಪ್ರಯಾಣಿಕರು
ವರದಿ : ಕನಕಪ್ಪ ಕೆ ತಳವಾರ, ಕೊಪ್ಪಳ